ಐಟಿ ಅಧಿಕಾರಿ ಪುತ್ರನ ಕೊಲೆ ಪ್ರಕರಣ: 2ನೆ ಆರೋಪಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು, ನ.27: ಆದಾಯ ತೆರಿಗೆ ಅಧಿಕಾರಿ ಪುತ್ರ ಶರತ್ ಅಪಹರಣ, ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿದ್ದ 2ನೆ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ವಿನಯ್ ಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿ ವಿನಯ್ ಪ್ರಸಾದ್‌ಗೆ ಜಾಮೀನು ನೀಡಿತು.
ಹಣದ ಆಸೆಗಾಗಿ ಶರತ್‌ನನ್ನು ಸೆ.13ರಂದು ಕಿಡ್ನಾಪ್ ಮಾಡಿ ನಂತರ ಪೊಲೀಸರ ಭಯದಿಂದ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನದ ಮೇಲೆ ವಿಶಾಲ್‌ನನ್ನು ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ವಿನಯ್ ಪ್ರಸಾದ್‌ನನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದರು.
Next Story





