ಮಂಗಳೂರು : ನೇತ್ರ ಪರೀಕ್ಷಾ ಶಿಬಿರ
ಮಂಗಳೂರು, ನ.27: ನಗರದ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸಂಚಾರಿ ನೇತ್ರ ಘಟಕದಿಂದ ಡಿಸೆಂಬರ್‌ನಲ್ಲಿ ನೇತ್ರ ಪರೀಕ್ಷಾ ಶಿಬಿರಗಳನ್ನು ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ.
ಡಿ.3ರಂದು ದೈಗೋಳಿ, ಸತ್ಯ ಸಾಯಿ ಮಂದಿರ, 10ರಂದು ವಿಟ್ಲದ ಪ್ರಾಥಮಿಕ ಆರೋಗ್ಯ ಕೇಂದ್ರ, 13ರಂದು ಕಡಬ, 17ರಂದು ಉಪ್ಪಿನಂಗಡಿ ವ್ಯಾಪ್ತಿ, 20ರಂದು ಬೆಳ್ತಂಗಡಿಯ ನೆರಿಯಾ, 24ರಂದು ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರ, 27ರಂದು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, 31ರಂದು ಪುತ್ತೂರು ವ್ಯಾಪ್ತಿಯ ಆನಂದಾಶ್ರಮದಲ್ಲಿ ನೇತ್ರ ಪರೀಕ್ಷಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರಗಳ ಸದುಪಯೋಗ ಪಡೆಯಲು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷರ ಪ್ರಕಟನೆ ತಿಳಿಸಿದೆ.
Next Story





