ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಪ್ರಕಟ

ಬೆಂಗಳೂರು, ನ.27: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2019-20ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2018ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಡಾ.ಪ್ರಧಾನ್ ಗುರುದತ್ತ-ಮೈಸೂರು, ನಾಡೋಜ ಎಸ್.ಆರ್.ರಾಮಸ್ವಾಮಿ-ಬೆಂಗಳೂರು, ಪ್ರೊ.ಬಾಲಚಂದ್ರ ಜಯಶೆಟ್ಟಿ-ಬೀದರ್, ಎಲ್.ವಿ. ಶಾಂತಕುಮಾರಿ-ಬೆಂಗಳೂರು, ಡಾ.ಆರ್.ಲಕ್ಷ್ಮೀ ನಾರಾಯಣ- ಬೆಂಗಳೂರು ಇವರು 2019-20ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಹಾಗೆಯೇ 2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅನುವಾದಕ ಡಾ.ಕೆ.ಪುಟ್ಟಸ್ವಾಮಿ ಅವರ ದಾಸ್ಯದಿಂದ ಆಚೆಗೆ (ಇಂಗ್ಲಿಷ್‌ನಿಂದ ಕನ್ನಡ), ಮೈತ್ರೇಯಿ ಕರ್ನೂರು ಅವರ ಎ ಹ್ಯಾಂಡ್‌ಫುಲ್ ಆಫ್ ಸೀಸೇಮ್(ಕನ್ನಡದಿಂದ ಇಂಗ್ಲಿಷ್), ಡಾ. ಸಿದ್ದರಾಮಸ್ವಾಮಿ ಅವರ ಭಾರತೀಯ ತತ್ವಶಾಸ್ತ್ರ,( ಹಿಂದಿಯಿಂದ ಕನ್ನಡ), ಡಾ.ನರೇಂದ್ರ ರೈ ದೇರ್ಲ ಅವರ ಕರ್ವಾಲೋ( ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ) ಮತ್ತು ಗೀತಾ ಶೆಣೈ ಅಂತರ ಆಯಾಮಿ (ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡ) ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಫಲಕ ಒಳಗೊಂಡಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







