ಬೆಳ್ಳೆ ಪದ್ಮನಾಭ ನಾಯಕ್‌ಗೆ ಕೆ.ಕೆ.ಹೆಬ್ಬಾರ್ ಹುಟ್ಟೂರ ಪ್ರಶಸ್ತಿ

ಶಿರ್ವ, ನ.28: ಕಟ್ಟಿಂಗೇರಿ ಎಡ್ಮೇರು ನಿಸರ್ಗ ಯುವಕ ಮಂಡಲದ ವತಿಯಿಂದ ನೀಡಲಾಗುವ ಎರಡನೇ ವರ್ಷದ ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾವಿದ ಕೆ.ಕೆ.ಹೆಬ್ಬಾರ ಹುಟ್ಟೂರ ಪ್ರಶಸ್ತಿಗೆ ಈ ಬಾರಿ ಹಿರಿಯ ಕಲಾವಿದ, ನಿವೃತ್ತ ಶಿಕ್ಷಕ ಬೆಳ್ಳೆ ಪದ್ಮನಾಭ ನಾಯಕ್‌ರನ್ನು ಆಯ್ಕೆ ಮಾಡಲಾಗಿದೆ
ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿರುವ ಪದ್ಮನಾಭ ನಾಯಕ್‌ರಿಗೆ ಇದೇ ನ.30ರ ಶನಿವಾರ ಸಂಜೆ ನಡೆಯುವ ಕಾರ್ಯಕ್ರಮ ದಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಯುವಕ ಮಂಡಲದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





