ಹೌ ಈಸ್ ದಿ ಜೋಶ್: ಬಿಜೆಪಿಗೆ ಕುಟುಕಿದ ಸೇನೆ
ಮುಂಬೈ, ನ.28: ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕೆಲ ಗಂಟೆಗಳ ಮೊದಲು ಬಿಜೆಪಿಯನ್ನು ಕುಟುಕಿರುವ ಶಿವಸೇನೆಯ ಮುಖಂಡ ಸಂಜಯ್ ರಾವತ್ ‘ಹೌ ಈಸ್ ದಿ ಜೋಶ್’ ಎಂದು ಪ್ರಶ್ನಿಸಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಹಿಂದಿ ಸಿನೆಮದಲ್ಲಿ ನಟ ವಿಕಿ ಕೌಶಲ್ ಅವರ ‘ಹೌ ಈಸ್ ದಿ ಜೋಶ್’ ಎಂಬ ಪಂಚ್ಲೈನ್ ಸಂಭಾಷಣೆಯನ್ನು ಉಲ್ಲೇಖಿಸಿರುವ ರಾವತ್, ಜೈ ಮಹಾರಾಷ್ಟ್ರ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಬಿಜೆಪಿ ಮುಖಂಡರು ಈ ಪಂಚ್ಲೈನ್ ಅನ್ನು ಹಲವು ಬಾರಿ ಬಳಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
Next Story