ಟ್ಯಾಲೆಂಟ್ ಮೊಬೈಲ್ ಕೋರ್ಸ್ 32ನೆ ಬ್ಯಾಚ್ ಉದ್ಘಾಟನೆ, ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮ

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ವತಿಯಿಂದ ನಡೆಸಲ್ಪಡುವ ಉಚಿತ ಮೊಬೈಲ್ ಟೆಕ್ನಿಶಿಯನ್ ಕೋರ್ಸಿನ 31 ನೇ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಹಾಗೂ ಹೊಸ ಬ್ಯಾಚ್‍ನ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ದರ್ಮೈ ಇನ್ಫ್ರಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಬಿಪಿ ಮುಸ್ತಾಕ್ ಅಹ್ಮದ್ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕುದ್ರೋಳಿ ಕಾರ್ಪೊರೇಟರ್ ಶಂಶುದ್ದೀನ್, ಸಾಲಿಡಾರಿಟಿ ಯೂತ್ ಮೂವ್‍ಮೆಂಟ್‍ನ ಅಶ್ಫಾಕ್ ಅಹ್ಮದ್, ನ್ಯಾಯವಾದಿ ಮತ್ತು ನೊಟರಿ ಮುಕ್ತಾರ್ ಅಹ್ಮದ್, ಪೆಟ್ರೊಕಾನ್ ಇನ್ಸ್ಟಿಟ್ಯೂಟ್‍ನ ಅಬ್ದುಲ್ ರಶೀದ್, ಶಿರೀನ್ ಎಂಟರ್ ಪ್ರೈಸಸ್‍ನ ಮಾಲಕ ಮುನೀರ್ ಎಮ್ ಕೆ, ಕೆ.ಕೆಎಮ್.ಎ ಇದರ ರಾಜ್ಯಾಧ್ಯಕ್ಷ ಎಸ್.ಎಮ್ ಫಾರೂಕ್, ಸಿವಿಲ್ ಕಂಟ್ರಾಕ್ಟರ್ ಮುಸ್ತಫಾ ಅಡ್ಡೂರು ಮತ್ತು ಟಿ.ಆರ್.ಎಫ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮೊಬೈಲ್ ಟೆಕ್ನಿಶಿಯನ್ ವಿದ್ಯಾರ್ಥಿ ಯಾಸೀನ್ ಸಹದಿ ಕಿರಾಅತ್ ಪಠಿಸಿದರು. ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು. ಮೊಬೈಲ್ ಟೆಕ್ನಿಶಿಯನ್ ಶಿಕ್ಷಕ ಅಬ್ದುಲ್ ಮಜೀದ್ ತುಂಬೆ ವಂದಿಸಿದರು. ನಕಾಶ್ ಬಾಂಬಿಲ ಕಾರ್ಯಕ್ರಮ ನಿರೂಪಿಸಿದರು.









.jpeg)















