ಯುನೈಟೆಡ್ ಎಂಪವರ್‌ಮೆಂಟ್ಸ್‌ನ ಪದಾಧಿಕಾರಿಗಳ ಪದಗ್ರಹಣ
ಮಂಗಳೂರು, ನ.29: ಯುನೈಟೆಡ್ ಎಂಪವರ್‌ಮೆಂಟ್ಸ್ ಅಸೋಸಿಯೇಶನ್ (ರಿ). ಕರ್ನಾಟಕ ಇದರ ಉಳ್ಳಾಲ ವಲಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ತೊಕ್ಕೊಟ್ಟಿನ ಖಾಸಗಿ ಹೊಟೇಲಿನಲ್ಲಿ ಜರುಗಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಮಾತನಾಡಿ ಮುಸ್ಲಿಮ್ ಸಮುದಾಯದ ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದ ಪ್ರತಿಭಾನ್ವಿತ, ಉದಯೋನ್ಮುಖ ಕ್ರೀಡಾಪಟುಗಳನ್ನು ಮುಖ್ಯ ವಾಹಿನಿಗೆ ತರುವ ಮತ್ತು ಕ್ರೀಡಾ ಸಾಧಕರಿಗೆ ಅರ್ಹ ಸ್ಥಾನಮಾನ ಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದರು.
ಸ್ಥಾಪಕ ಸದಸ್ಯ ಇಕ್ಬಾಲ್ ಹಸನ್, ರಾಜ್ಯ ಸಮಿತಿ ಸದಸ್ಯರಾದ ನಝೀರ್ ಅಲ್ಫಾ ಉಳ್ಳಾಲ್, ಫಯಾಝ್ ಪಟ್ಲ, ಅಬೂಬಕರ್ ಸಿದ್ದೀಕ್ ಶಾಫಿ ಹಳೆಕೋಟೆ, ಮುಹಮ್ಮದ್ ರಿಯಾಝ್ ಹಳೆಕೋಟೆ, ಇಮ್ತಿಯಾಝ್ ಅಳೇಕಲ ಉಪಸ್ಥಿತರಿದ್ದರು.
ಉಳ್ಳಾಲ ಘಟಕದ ನೂತನ ಅಧ್ಯಕ್ಷರಾಗಿ ಉದ್ಯಮಿ ಅಬ್ದುರ್ರಹ್ಮಾನ್, ಉಪಾಧ್ಯಕ್ಷರಾಗಿ ಹಸನಬ್ಬ ಯಾನೆ ಪುತ್ತುಬಾವ, ಸುಲ್ತಾನ್ ಬಿಲ್ಡರ್ಸ್‌ನ ಯು.ಬಿ.ಮುಹಮ್ಮದ್, ಮುಹಮ್ಮದ್ ಇಶಾಕ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಸಾಮಾನಿಗೆ, ಜೊತೆ ಕಾರ್ಯದರ್ಶಿಯಾಗಿ ಸಾಧಿಕ್ ಕಲ್ಲಾಪು, ಕೋಶಾಧಿಕಾರಿಯಾಗಿ ಮುಹಮ್ಮದ್ ರಿಯಾಝ್, ಕ್ರೀಡಾ ಸಂಯೋಜಕರಾಗಿ ಅಹ್ಮದ್ ಶರೀಫ್, ಕ್ರೀಡಾ ಸಂಚಾಲಕರಾಗಿ ಮಂಗಳೂರು ರಿಯಾಝ್, ಟೂರ್ನಿಮೆಂಟ್‌ನ ಕಾರ್ಯದರ್ಶಿಯಾಗಿ ಫಯಾಝ್ ಪಟ್ಲ, ಅಫ್ರೀದ್, ಮಾಧ್ಯಮ ಸಂಯೋಜಕರಾಗಿ ಮುಹಮ್ಮದ್ ಅಶೀರುದ್ದೀನ್ ಮಂಜನಾಡಿ, ಕಾನೂನು ಸಲಹೆಗಾರರಾಗಿ ಅಬ್ದುಲ್ ರಝಾಕ್ ಶರ್ಮದ್, ಕ್ರಿಕೆಟ್ ಸಂಚಾಲಕರಾಗಿ ಅಫ್ತಾಬ್, ಕಬಡ್ಡಿ ಸಂಚಾಲಕರಾಗಿ ಇಸ್ಮಾಯಿಲ್ ಕಿನ್ಯ, ಫುಟ್ಬಾಲ್ ಸಂಚಾಲಕರಾಗಿ ಯು.ಎಂ. ತಮೀಮ್, ಶಟಲ್ ಬ್ಯಾಡ್ಮಿಂಟನ್ ಸಂಚಾಲಕರಾಗಿ ತೌಸೀಫ್ ಯು.ಟಿ, ಇತರ ಕ್ರೀಡೆಗಳ ಸಂಚಾಲಕರಾಗಿ ಅಬ್ದುರ್ರಹ್ಮಾನ್ ಮತ್ತು ಶಿಹಾಬ್ ಹಾಗೂ ದೇರಳಕಟ್ಟೆಯ ಕ್ರೀಡಾ ಉಸ್ತುವಾರಿಯಾಗಿ ಅಕ್ರಮ್, ಮಾಡೂರು- ತಲಪಾಡಿಗೆ ಮುಹಮ್ಮದ್ ಇಲ್ಯಾಸ್, ಕೋಡಿ-ಕೋಟೆಪುರಕ್ಕೆ ಸದಕತುಲ್ಲಾ, ಮಾಸ್ತಿಕಟ್ಟೆ-ಮಿಲ್ಲತ್ ನಗರಕ್ಕೆ ಯು.ಎಂ. ತಮೀಮ್, ಹಳೆಕೋಟೆ-ಅಕ್ಕರೆಕೆರೆಗೆ ಮುಝಮ್ಮಿಲ್, ಮುಕ್ಕಚ್ಚೇರಿ-ಕಡಪುರಕ್ಕೆ ಫಿರೋಝ್, ಮಂಚಿಲ-ಅಲೇಕಳಕ್ಕೆ ಜಾಸಿಮ್, ಬಸ್ತಿಪಡ್ಪು-ಮೇಲಂಗಡಿಗೆ ನೌಶಾದ್, ಸೋಮೇಶ್ವರ-ಕೋಟೆಕಾರ್‌ಗೆ ಅಶ್ವೀರ್ ಅವರನ್ನು ಆಯ್ಕೆ ಮಾಡಲಾಯಿತು.