ಉಳ್ಳಾಲ ನ್ಯೂಬಿ ಶಾಲೆಯಲ್ಲಿ ಮೀಲಾದ್ ಫೆಸ್ಟ್

ಮಂಗಳೂರು, ನ.29: ಉಳ್ಳಾಲ ನ್ಯೂಬಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮೀಲಾದ್ ಫೆಸ್ಟ್, ಮೀಲಾದ್ ರ್ಯಾಲಿ ಮತ್ತು ಮೌಲಿದ್ ಪಾರಾಯಣ ಕಾರ್ಯಕ್ರಮವನ್ನು ಉಳ್ಳಾಲ ಎಸ್‌ವೈಎಸ್ ಸೆಂಟರ್ ಗೌರವಾಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್ ಉದ್ಘಾಟಿಸಿದರು.
ಮಂಜನಾಡಿ ಅಲ್ ಮದೀನಾದ ನಿರ್ದೇಶಕ ಮುಹಮ್ಮದ್ ಕುಂಞಿ ಅಂಜದಿ ಮಾತನಾಡಿ ಪುಟಾಣಿ ಮಕ್ಕಳು ಪ್ರವಾದಿ ಪೈಗಂಬರ್ ಅವರ ಕೀರ್ತನೆಯನ್ನು ಉತ್ತಮ ರೀತಿಯಲ್ಲಿ ಪಠಿಸುತ್ತಿದ್ದಾರೆ, ಈ ಪುಟಾಣಿಗಳ ಭವಿಷ್ಯ ಉಜ್ವಲವಾಗಲಿ ಎಂದರು.
ಉಳ್ಳಾಲ ನ್ಯೂಬಿ ಶಾಲೆಯ ಅಧ್ಯಕ್ಷ ರಶೀದ್ ಹಾಜಿ ಪಾಂಡೇಶ್ವರ, ಆಡಳಿತ ನಿರ್ದೇಶಕ ಕುಬೈಬ್ ತಂಙಳ್, ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ, ಸುಂದರಿಬಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ಸಅದಿ, ಮುಕ್ಕಚ್ಚೇರಿ ಮಸೀದಿಯ ಮುದರ್ರಿಸ್ ಝೈದ್ ಬಾ ಅಹ್ಸನಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಮುಸ್ತಫ ಮಾಸ್ಟರ್ ಉಪಸ್ಥಿತರಿದ್ದರು.
ಮುಹಮ್ಮದ್ ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
Next Story





