ಪಿ.ಎ.ಭಟ್

ಉಡುಪಿ, ನ. 29: ಉಡುಪಿಯ ಚ್ಯವನ ಲ್ಯಾಬೋರೇಟರಿಯ ಸ್ಥಾಪಕ, ಲಯನ್ಸ್ ಮುಂದಾಳು ಪುಂಡಲೀಕ ಅನಂತ ಭಟ್ (ಪಿ.ಎ.ಭಟ್-70) ಅಲ್ಪಕಾಲದ ಅಸೌಖ್ಯದಿಂದ ನ.29ರಂದು ನಿಧನ ಹೊಂದಿದರು. ಮೃತರು ಪತ್ನಿಯನ್ನು ಅಗಲಿದ್ದಾರೆ.
ಕಲ್ಯಾಣಪುರ ಅರ್ಚಕ, ಪೌರೋಹಿತ್ಯ ಕುಟುಂಬದಿಂದ ಬಂದ ಭಟ್ ಅವರು ಪ್ರಸ್ತುತ ಕಡೆಕಾರಿನಲ್ಲಿ ವಾಸ್ತವ್ಯವಿದ್ದರು. ಭಟ್ ಅವರು ಚ್ಯವನ ಲ್ಯಾಬೋರೇಟರಿ ಯನ್ನು 34 ವರ್ಷಗಳ ಹಿಂದೆ ಸ್ಥಾಪಿಸಿ ಅದರ ಮೂಲಕ ಅನೇಕ ಉಚಿತ ರಕ್ತ ತಪಾಸಣೆ ಶಿಬಿರಗಳನ್ನು ನಡೆಸಿ ಸಮಾಜಮುಖೀ ಸೇವೆ ಸಲ್ಲಿಸುತಿದ್ದರು. ಲ್ಯಾಬ್ ಟೆಕ್ನಿಶಿಯನ್ ಕೋರ್ಸುಗಳನ್ನು ನಡೆಸುತಿದ್ದರು. ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯರಾಗಿದ್ದ ಭಟ್, ಪ್ರಸ್ತುತ ಕಲ್ಯಾಣಪುರ ಕ್ಲಬ್‌ನ ಅಧ್ಯಕ್ಷರಾಗಿದ್ದರು.
ಶ್ರೀಕೃಷ್ಣಮಠದಲ್ಲಿರುವ ಧನ್ವಂತರಿ ಚಿಕಿತ್ಸಾಲಯದ ಮೇಲುಸ್ತುವಾರಿಯನ್ನು ಭಟ್ ವಹಿಸಿಕೊಂಡಿದ್ದರು. ಇವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿರುವ ಪರ್ಯಾಯ ಶ್ರೀಪಲಿಮಾರು ಮಠಾಧೀಶರು, ಭಟ್‌ರ ನಿನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





