Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದೇಶದ ಕಲೆ ಸಂಸ್ಕೃತಿಯ ಬಗ್ಗೆ...

ದೇಶದ ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನವಿರುವ ರಾಷ್ಟ್ರಪ್ರೇಮ ಇರಲಿ: ಡಾ.ಕೆಕೆ ಮುಹಮ್ಮದ್

ವಾರ್ತಾಭಾರತಿವಾರ್ತಾಭಾರತಿ29 Nov 2019 10:31 PM IST
share
ದೇಶದ ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನವಿರುವ ರಾಷ್ಟ್ರಪ್ರೇಮ ಇರಲಿ: ಡಾ.ಕೆಕೆ ಮುಹಮ್ಮದ್

ಮಂಗಳೂರು, ನ. 29: ದೇಶದ ಪುರಾತನ ಮಹತ್ವದ ಕಲೆ ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿರುವ ಉನ್ನತ ಮನೋಭಾವದ ರಾಷ್ಟ್ರೀಯತೆ ಬೇಕು ಆದರೆ ಅತಿರೇಕದ ರಾಷ್ಟ್ರೀಯತೆ ಒಳ್ಳೆಯದಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಕೆ. ಮುಹಮ್ಮದ್ ತಿಳಿಸಿದ್ದಾರೆ.

ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಕೆ. ಕೆ. ಮುಹಮ್ಮದ್ ಅವರು ಮಂಗಳೂರು ಲಿಟ್ ಫೆಸ್ಟ್ ನಲ್ಲಿ ನಡೆದ ’ಸತ್ಯದ ಉತ್ಖನನ’ ಎಂಬ ವಿಷಯದ ಕುರಿತ ಸಂವಾದದಲ್ಲಿ ಭಾಗವಹಿಸಿದ ದೇಶದ ವಿವಿಧ ಪ್ರದೇಶಗಳಲ್ಲಿ ಉತ್ಖನನ ನಡೆಸಿದ ತಮ್ಮ ಅನುಭವವನ್ನು ಹಂಚಿಕೊಂಡರು.

ಭಾರತ ಪುರಾತತ್ವ ಇಲಾಖೆಯಲ್ಲಿ ತಮ್ಮ 40 ವರ್ಷಗಳ ಕೆಲಸದ ಅನುಭವಗಳನ್ನು ಸಭೆಯ ಮುಂದೆ ತೆರೆದಿಟ್ಟರು.

*ತಾಜ್ ಮಹಲ್ ದೇವಾಲಯದ ರಚನೆಯನ್ನು ಹೋಲುವುದಿಲ್ಲ:- ದೇಶದ ಪುರಾತತ್ವ ಇಲಾಖೆಯ ಅಧ್ಯಯನದಿಂದ ಸಾಕಷ್ಟು ನೈಜ ಸಂಗತಿಗಳು ಬಯಲಾಗಿದೆ. ಆದರೆ ಇವುಗಳನ್ನು ಮೂಲೆಗುಂಪಾಗಿಸಿ ಮಾಡುವ ಅತಿರೇಕದ ರಾಷ್ಟ್ರಪ್ರೇಮ ಒಳ್ಳೆಯದಲ್ಲ. ಉದಾಹರಣೆಗೆ ತಾಜ್ ಮಹಲ್ ಯಾವೂದೇ ಶೈವ ಅಥವಾ ವೈಷ್ಣವ ದೇವಾಲಯವನ್ನು ಹೊಲುವುದಿಲ್ಲ. ದೇಶದಲ್ಲಿ 11ನೆ ಶತಮಾನದ ಮೊದಲು ಯಾವೂದೇ ಭಾರತದಲ್ಲಿ ಗುಂಭಜ್‌ಗಳ ಕಟ್ಟಡಗಳು ನಿರ್ಮಾಣಗೊಂಡ ಉದಾಹರಣೆಗಳಿಲ್ಲ.ತಾಜ್ ಮಹಲ್ ನಿರ್ಮಾಣವಾಗಿರುವುದು 1526ರ ಬಳಿಕ ಎರಡು ಗುಂಭಜ್‌ಗಳ ಕಟ್ಟಡ ದೇಶದಲ್ಲಿ ನಿರ್ಮಾಣಗೊಂಡಿದೆ. ಆ ಕಾರಣದಿಂದ ಅದನ್ನು 11ನೆ ಶತಮಾನದ ಹಿಂದಿನ ಶೈವ ಮಂದಿರ ಎಂದರೆ ತಪ್ಪಾಗುತ್ತದೆ. ತಾಜ್ ಮಹಲ್ ಮಧ್ಯಕಾಲೀನ ಭಾರತದಲ್ಲಿ ಇಂಡೋ-ಮುಸ್ಲಿಂ ವಾಸ್ತು ಶಿಲ್ಪದ ಮೂಲಕ ರಚನೆಗೊಂಡ ಕಟ್ಟಡ. ನಿರ್ಮಾಣದ ಬಗ್ಗೆ ಆಯೋಧ್ಯೆಯ ಬಾಬ್ರಿ ಮಸೀದಿ -ಶ್ರೀರಾಮ ಜನ್ಮಭೂಮಿಯ ಪ್ರದೇಶದಲ್ಲಿ ಉತ್ಖನನ ನಡೆಸಿದ ತಮ್ಮ ಅನುಭವ ಹಂಚಿಕೊಂಡರು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಡೆದ ಮೊದಲ ಉತ್ಖನನದಲ್ಲೇ ನೆಲದಡಿ ಹುದುಗಿದ್ದ ಮಂದಿರದ 12 ಕಂಬಗಳು ಸಿಕ್ಕಿದ್ದವು. ಎರಡನೆಯ ಬಾರಿ ನಡೆದ ಉತ್ಖನನವೂ ಅಲ್ಲಿ ಮಸೀದಿಗೆ ಮೊದಲು ಮಂದಿರವಿದ್ದದ್ದನ್ನು ಖಚಿತಪಡಿಸಿದವು. ಇದರ ಆಧಾರದ ಮೇಲೆಯೇ ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪು ನೀಡಿದೆ ಎಂದು ಅವರು ಹೇಳಿದರು.

ಆಯೋಧ್ಯೆಯಲ್ಲಿ ಮಂದಿರವನ್ನು ಕೆಡವಿ ಅಲ್ಲಿನ ಮಸೀದಿ ನಿರ್ಮಿಸಿರುವ ಕಾರಣಕ್ಕಾಗಿ ಇಲ್ಲಿನ ಮುಸಲ್ಮಾನರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಅದು ಅಪಘಾನಿಸ್ತಾನದಿಂದ ಆ ಕಾಲದಲ್ಲಿ ಬಂದ ರಾಜರು ಮಾಡಿರುವ ಕೃತ್ಯ ಎನ್ನುವ ವಾಸ್ತವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಕೆ.ಕೆ.ಮೊಹಮ್ಮದ್ ತಿಳಿಸಿದ್ದಾರೆ.

ಪುರಾತತ್ವ ಕಲೆ ಸಂಸ್ಕೃತಿ ನಮ್ಮ ದೇಶದ ಸಂಪತ್ತು ಅದನ್ನು ಸರಿಯಾಗಿ ಬಳಸಿಕೊಳ್ಳಲು ನಮಗೆ ತಿಳಿದಿರಬೇಕು .ನಾವು ವಿಭಿನ್ನದ ಸಂಸ್ಕೃತಿ ಪರಂಪರೆ ಹೊಂದಿದ್ದರೂ ಭಾರತೀಯರು ಎಲ್ಲರೂ ಒಂದೇ ಎನ್ನುವ ರಾಷ್ಟ್ರ ಪ್ರೇಮ ಇಂದಿನ ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೆ ಇದು ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಕೆ. ಮುಹಮ್ಮದ್ ಅವರು ಬರೆದ ’ನಾನೆಂಬ ಭಾರತೀಯ’ ಎಂಬ ಅನುವಾದಿತ ಪುಸ್ತಕ ಈ ಸಂದರ್ಭದಲ್ಲಿ ಬಿಡುಗಡೆಗೊಂಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X