ಜಾರ್ಖಂಡ್: ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ
12 ಆರೋಪಿಗಳ ಬಂಧನ

ರಾಂಚಿ, ನ.29: ರಾಂಚಿಯಲ್ಲಿ 25 ವರ್ಷದ ಕಾನೂನು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆಗೆ ಸಂಬಂಧಿಸಿ 12 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ 5:30ಕ್ಕೆ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿ ನಗರದ ಹೊರವಲಯದ ಸಂಗ್ರಾಮಪುರ ಎಂಬಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಆಕೆಯನ್ನು ಸಮೀಪದಲ್ಲಿದ್ದ ಇಟ್ಟಿಗೆ ಗೂಡಿನ ಬಳಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಯುವತಿ ಕಾಂಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ 12 ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಕಾರು, ಮೋಟಾರ್ ಬೈಕ್, ಪಿಸ್ತೂಲ್, ಎರಡು ಸಜೀವ ಕಾರ್ಟ್ರಿಡ್ಜ್‌ಗಳು, ಎಂಟು ಮೊಬೈಲ್ ಫೋನ್‌ಗಳು ಹಾಗೂ ಸಂತ್ರಸ್ತ ಯುವತಿಯ ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಿಷಬ್ ಕುಮಾರ್ ಝಾ ತಿಳಿಸಿದ್ದಾರೆ.
Next Story