ಮುಂಬೈ ಕನ್ನಡಿಗರ ಕ್ಷಮೆಯಾಚಿಸಿದ ಶಾಸಕ ತಮ್ಮಣ್ಣ

ಮಂಡ್ಯ, ನ.29: ಕೆ.ಅರ್.ಪೇಟೆ ಚುನಾವಣಾ ಪ್ರಚಾರ ವೇಳೆ ಮಾತಿಗೆ ಶಾಸಕ ಡಿ.ಸಿ.ತಮ್ಮಣ್ಣ ಕ್ಷಮೆಯಾಚಿಸಿದ್ದು, ಕೆ.ಆರ್.ಪೇಟೆ ಅಭಿವೃದ್ಧಿಯಾಗಿಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದೆ, ಅಕ್ಕ-ತಂಗಿಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಶುಕ್ರವಾರ ಕೆ.ಆರ್.ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕನ್ನಡಿಗರ ಬಗ್ಗೆ, ಅದರಲ್ಲೂ ಕೆ.ಆರ್.ಪೇಟೆ ಜನರ ಬಗ್ಗೆ ಅತೀವವಾದ ಗೌರವ ಇದೆ. ಇಲ್ಲಿನ ಜನ ಸ್ವಾಭಿಮಾನಿಗಳು. ಆದರೆ, ನನ್ನ ಹೇಳಿಕೆಯನ್ನು ಬೇರೆ ರೀತಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಚಿವರು ಕೆ.ಆರ್.ಪೇಟೆ ಕ್ಷೇತ್ರಕ್ಕೆ 125 ಕೋಟಿ ಅನುದಾನ ಕೊಟ್ಟಿದ್ದರು. ಆದರೆ, ಸಿಎಂ ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಗೆ ಹೋಗುವ ರಸ್ತೆಯನ್ನೇ ಅಭಿವೃದ್ಧಿ ಮಾಡಿಲ್ಲ. ಇನ್ನು ಕೆ.ಆರ್.ಪ್ಭೆಟೆಯನ್ನು ನಾರಾಯಣಗೌಡರು ಬಾಂಬೆ ಮಾಡ್ತಾರಾ ಎಂಬ ಅರ್ಥದಲ್ಲಿ ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದರು.
Next Story





