ಪ್ರತಿಷ್ಠಿತ ಟ್ರಂಪ್ ಟವರ್ಸ್ ಗೆ ಎಕೆ ಡೋರ್ಸ್
ಮುಂಬೈನ ವಿಲಾಸಿ ವಸತಿ ಸಮುಚ್ಛಯಕ್ಕೆ ಮಂಗಳೂರು ಕಂಪೆನಿಯ ಉತ್ಪನ್ನ

ಟ್ರಂಪ್ ಟವರ್ ಮುಂಬೈ
ಮಂಗಳೂರು, ನ. 30 : ಮುಂಬೈಯ ವರ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಟ್ರಂಪ್ ಆರ್ಗನೈಸೇಶನ್ ನ ವಿಲಾಸಿ ಬಹುಮಹಡಿ ವಸತಿ ಸಮುಚ್ಛಯ ಟ್ರಂಪ್ ಟವರ್ ಗೆ ಮಂಗಳೂರು ಮೂಲದ ಖ್ಯಾತ ಕಂಪೆನಿ ಎಕೆ ಪ್ಲೈವುಡ್ ಬಾಗಿಲು ಮತ್ತಿತರ ಪ್ಲೈವುಡ್ ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ಗಮನ ಸೆಳೆದಿದೆ.
ಮುಂಬೈಯ ಖ್ಯಾತ ರಿಯಲ್ ಎಸ್ಟೇಟ್ ಕಂಪೆನಿ ಲೋಧಾ ಗ್ರೂಪ್ ಟ್ರಂಪ್ ಆರ್ಗನೈಸೇಶನ್ ಜೊತೆ ಪಾಲುದಾರಿಕೆಯಲ್ಲಿ ಈ ಅತ್ಯಂತ ವಿಲಾಸಿ, ದುಬಾರಿ ವಸತಿ ಸಮುಚ್ಛಯವನ್ನು ನಿರ್ಮಿಸುತ್ತಿದೆ. 75 ಮಹಡಿಗಳ, 268 ಮೀಟರ್ ಎತ್ತರದ ಈ ಯೋಜನೆಯಲ್ಲಿ ನಿವಾಸಿಗಳಿಗೆ ಖಾಸಗಿ ಜೆಟ್ ಸಹಿತ ಹಲವು ಅತ್ಯಂತ ವಿಶೇಷ , ಅತ್ಯಂತ ದುಬಾರಿ ಸವಲತ್ತುಗಳು ಲಭ್ಯ ಇವೆ. ಸಿಂಗಾಪುರದ ಹಿರ್ಶ್ ಬೆಡ್ನರ್ ಅಸೋಸಿಯೇಟ್ಸ್ ಈ ಯೋಜನೆಯನ್ನು ವಿನ್ಯಾಸಗೊಳಿಸಿದೆ. ಇಂತಹ ಪ್ರತಿಷ್ಠಿತ ಯೋಜನೆಗೆ ಬಾಗಿಲು ಮತ್ತಿತರ ಪ್ಲೈವುಡ್ ಉತ್ಪನ್ನಗಳನ್ನು ಎಕೆ ಗ್ರೂಪ್ ನಿಂದ ಖರೀದಿಸಲಾಗಿದೆ.
ಮಂಗಳೂರಿನಲ್ಲಿ ಎ ಕೆ ಅಹ್ಮದ್ ಅವರು ಪ್ರಾರಂಭಿಸಿದ ಎಕೆ ಗ್ರೂಪ್ ಇಂದು ದೇಶದಲ್ಲೇ ಅತ್ಯಂತ ಪ್ರಸಿದ್ಧ ಪ್ಲೈವುಡ್ ಹಾಗು ಸಂಬಂಧಿತ ಉತ್ಪನ್ನಗಳಿಗೆ ಅಗ್ರಸ್ಥಾನದಲ್ಲಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ಲೈವುಡ್, ಬ್ಲೋಕ್ ಬೋರ್ಡ್, ಫ್ಲಶ್ ಡೋರ್ಸ್, ಡೆಕೋರೇಟಿವ್ ವಿನೀರ್ಸ್ , ಲ್ಯಾಮಿನೇಟ್ಸ್ ಹಾಗು ಇಂಜಿನಿಯರ್ಡ್ ವುಡ್ಸ್ ಉತ್ಪನ್ನಗಳನ್ನು ಎಕೆ ಗ್ರೂಪ್ ಸರಬರಾಜು ಮಾಡುತ್ತದೆ. ಪ್ಲೈವುಡ್ ಸಂಬಂಧಿತ ಹಲವು ಉತ್ಪನ್ನಗಳ ತಯಾರಿಕೆ ಜೊತೆ ದೇಶಾದ್ಯಂತ ಮಾರ್ಕೆಟಿಂಗ್ ಹಾಗು ಸರಬರಾಜು ಜಾಲವನ್ನು ಎಕೆ ಗ್ರೂಪ್ ಹೊಂದಿದೆ.
ಪ್ಲ್ಯಾನ್ ಮ್ಯಾನ್ ಮೀಡಿಯಾ 2017ರಲ್ಲಿ ಆಯೋಜಿಸಿದ್ದ ಪವರ್ ಬ್ರಾಂಡ್ಸ್ ಗ್ಲೋಬಲ್ ಲಂಡನ್ ಇಂಟರ್ ನ್ಯಾಶನಲ್ ಫೋರಂ ಫಾರ್ ಇಕ್ವಾಲಿಟಿಯಲ್ಲಿ ಎ.ಕೆ. ಪ್ಯಾನೆಲ್ಸ್ 'ಪವರ್ ಬ್ರಾಂಡ್ಸ್ ರೈಸಿಂಗ್ ಸ್ಟಾರ್ಸ್' ಪುರಸ್ಕಾರವನ್ನು ತನ್ನದಾಗಿಸಿದೆ.

"ಮಂಗಳೂರಿನಲ್ಲಿ ಮೂರು ದಶಕಗಳ ಹಿಂದೆ ನಮ್ಮ ಪ್ರಾರಂಭದ ದಿನಗಳಲ್ಲೇ ನಮ್ಮ ಉತ್ಪನ್ನಗಳನ್ನು ಬಳಸಿ ಪ್ರೋತ್ಸಾಹಿಸಿದವರು ಪ್ರತಿಷ್ಠಿತ ಮೊಹತಿಶಾಮ್ ಕಾಂಪ್ಲೆಕ್ಸಸ್ ನ ಎಸ್. ಎಂ. ಅರ್ಷದ್ ಹಾಗು ಜನತಾ ಕನ್ಸ್ ಟ್ರಕ್ಷನ್ಸ್ ನ ರಮೇಶ್ ಕುಮಾರ್ ಅವರು. ಅಲ್ಲಿಂದ ದೇವರ ದಯೆ, ಗ್ರಾಹಕರ ವಿಶ್ವಾಸದಿಂದ ಮತ್ತು ನಮ್ಮ ಸಿಬ್ಬಂದಿಯ ಶ್ರಮದಿಂದ ಇಲ್ಲಿಯವರೆಗೆ ಕಂಪೆನಿ ಬೆಳೆದು ಬಂದಿದೆ. ಈಗ ಎಕೆ ಗ್ರೂಪ್ ನ ಉತ್ಪನ್ನಗಳನ್ನು ಟಾಟಾ, ವಿಪ್ರೋದಂತಹ ಪ್ರತಿಷ್ಠಿತ ಕಂಪೆನಿಗಳು, ಐಟಿಸಿ, ತಾಜ್, ರಾಡಿಸನ್ , ಲೀಲಾ ಹೋಟೆಲ್ ಗಳು, ದೇಶದ ಪ್ರಮುಖ ವಿಮಾನ ನಿಲ್ದಾಣಗಳು ನಿರಂತರ ಬಳಸುತ್ತಿವೆ. ಆಪಲ್, ಅಲ್ಪೈನ್ ನಮ್ಮ ಅತ್ಯಂತ ಪ್ರಖ್ಯಾತ ಬ್ರಾಂಡ್ ಗಳಾಗಿವೆ. ಎ.ಕೆ. ಪ್ಲೈವುಡ್ಸ್ ಪರಿಸರ ಸ್ನೇಹಿಯಾಗಿದ್ದು, ಹಸಿರು ಕಟ್ಟಡಗಳಿಗೆ ಹೊಂದುವಂತಹ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಈಗ ಎಕೆ ಗ್ರೂಪ್ ದೇಶದಲ್ಲೇ ಅತಿದೊಡ್ಡ ವಿಶಾಲ ಆಯ್ಕೆಗಳ ಬಾಗಿಲು ತಯಾರಕ ಕಂಪೆನಿ ಎಂದು ಹೆಸರು ಮಾಡಿದೆ. ಮಿತ ದರದಲ್ಲಿ ಗ್ರಾಹಕರಿಗೆ ಸೂಕ್ತ ಪರಿಸರ ಸ್ನೇಹಿ , ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಮ್ಮ ಸಂಸ್ಥೆ ನೀಡುತ್ತಾ ಬಂದಿದೆ. ಸ್ಟೀಲ್ ರೀ ಇನ್ಫೋರ್ಸ್ಡ್ ಪ್ಲೈ , ಫೈರ್ ರೇಟೆಡ್ ಡೋರ್ ಗಳು, ಫೈರ್ ರೇಟೆಡ್ ಪ್ಲೈ ನಂತಹ ವಿಶೇಷ ಸಾಮರ್ಥ್ಯದ ಉತ್ಪನ್ನಗಳನ್ನು ನಮ್ಮ ಸಂಸ್ಥೆ ಉತ್ಪಾದಿಸುತ್ತಿದ್ದು ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಬಿಐಎಸ್ ಪ್ರಮಾಣಿತ ಉತ್ಪನ್ನಗಳನ್ನು ನಾವು ನೀಡುತ್ತಿದ್ದೇವೆ. ಇದೀಗ ಟ್ರಂಪ್ ಟವರ್ ಗೆ ನಮ್ಮ ಉತ್ಪನ್ನಗಳನ್ನು ಬಳಸಿರುವುದು ಹೆಮ್ಮೆಯ ವಿಷಯ" ಎಂದು ಟ್ರಂಪ್ ಟವರ್ ಗೆ ಬಾಗಿಲುಗಳನ್ನು ಸರಬರಾಜು ಮಾಡಿರುವ ಬಗ್ಗೆ ಎಕೆ ಗ್ರೂಪ್ ನ ನಿರ್ದೇಶಕ ಮಂಡಳಿಯ ಪ್ರಕಟನೆ ತಿಳಿಸಿದೆ.









