ಕಾಂಗ್ರೆಸ್-ಜೆಡಿಎಸ್ ಮರು ಮದುವೆ ಸಾಧ್ಯವಿಲ್ಲ: ಡಿಸಿಎಂ ಗೋವಿಂದ ಕಾರಜೋಳ

ಹೊಸಪೇಟೆ, ನ. 30: ‘ಒಮ್ಮೆ ಸೋಡಾ ಚೀಟಿ ಕೊಟ್ಟ ಮೇಲೆ ಒಗ್ಗೂಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮರು ಮದುವೆ ಸಾಧ್ಯವಿಲ್ಲ’ ಎಂದು ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಹೇಳಿದ್ದಾರೆ.
ಶನಿವಾರ ಹೊಸಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್ ಪರ ಪ್ರಚಾರದ ವೇಳೆ ಮಾತನಾಡಿದ ಅವರು, 2018ರ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿತ್ತು. ಇದೀಗ ಅದು ಮುರಿದು ಬಿದ್ದಿದೆ ಎಂದು ಹೇಳಿದರು.
ಹೋರಿ ಬೆನ್ನು ಹತ್ತಿದ ನರಿ, ಅದರ ಮಾಂಸ ತಿನ್ನುವ ಕನಸು ಕಾಣುತ್ತಿತ್ತು. ಅದರಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ಸರಕಾರ ಪತನವಾಗುವ ಕನಸು ಕಾಣುತ್ತಿದ್ದಾರೆ. ಆದರೆ, ಅದು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ. ನಮ್ಮ ಸರಕಾರ ಮೂರುವರೆ ವರ್ಷ ಅಧಿಕಾರ ನಡೆಸಲಿದೆ ಎಂದು ಕಾರಜೋಳ ನುಡಿದರು.
Next Story





