ಮಂಗಳೂರು : ಡಿ.1ರಂದು ಸೋಜಾ ಕ್ಯಾಶ್ಯೂಸ್ ನಿಂದ ‘ಎಸ್ -ನಟ್ಸ್ ’ಮಳಿಗೆ ಉದ್ಘಾಟನೆ
ಮಂಗಳೂರು, ನ. 30: ಸೋಜಾ ಕ್ಯಾಶ್ಯೂಸ್ ಸಂಸ್ಥೆಯ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಜಾನ್ವಿ ಪ್ಲಾಝಾದಲ್ಲಿ ಗೇರು ಬೀಜ ಹಾಗೂ ಒಣ ಹಣ್ಣುಗಳ ಮಳಿಗೆ ‘ಎಸ್-ನಟ್ಸ್ ’ರವಿವಾರ ಬೆಳಗ್ಗೆ 11.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಕರಾವಳಿ ಕರ್ನಾಟಕದಲ್ಲಿ ಈಗಾಗಲೆ ಆರೋಗ್ಯಕರ ತಿನಿಸುಗಳ ತಯಾರಿ ಮತ್ತು ಚಿಲ್ಲರೆ ಹಾಗೂ ಸಗಟು ಮಾರಾಟದಲ್ಲಿ ಖ್ಯಾತಿ ಪಡೆದಿರುವ ಎಸ್-ನಟ್ಟ್ ನಾಲ್ಕು ವರ್ಷಗಳ ಹಿಂದೆ ಉಡುಪಿಯಲ್ಲಿ ಮಾರಾಟ ಮಳಿಗೆಯನ್ನು ತೆರೆದಿದೆ. ಎಸ್-ನಟ್ಸ್ ಮಳಿಗೆ ಸಂಸ್ಕರಿಸಿದ ತಾಜಾ ಗೊಡಂಬಿ, ಪ್ಲೇವರ್‌ಡ್ ಕ್ಯಾಶ್ಯೂ, ಬಾದಾಮಿ, ಖರ್ಜೂರ ವಿವಿಧ ಸಂಸ್ಕರಿಸಿದ ಒಣ ಹಣ್ಣುಗಳ ಸಂಗ್ರಹವನ್ನು ಹೊಂದಿದೆ.
ಮಂಗಳೂರಿನ ಎಸ್ ನಟ್ಸ್ ಮಳಿಗೆಯನ್ನು ನಿಟ್ಟಿ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಲೂರ್ಡ್ಸ್ ಸ್ಕೂಲ್‌ನ ಪ್ರಾಂಶುಪಾಲ ವಂ.ರಾಬರ್ಟ್ ಡಿ ಸೋಜ, ಶಾಸಕ ವೇದವ್ಯಾಸ ಕಾಮತ್, ಆಸ್ಕರ್ ಫೆರ್ನಾಂಡೀಸ್, ಶಾಸಕ ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಕಚೇರಿಯ ಜಿ.ಎಂ ಭಾಸ್ಕರ ಹಂದೆ, ಕೆಸಿಸಿಯ ಅಧ್ಯಕ್ಷ ಐಸಾಕ್ ವಾಝ್, ಕೆಸಿಎಂಎ ಅಧ್ಯಕ್ಷ ಸುಬ್ರಾಯ ಪೈ ಹಾಗೂ ಎಸ್.ಎಸ್.ಕಾಮತ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಡಾಕ್ರಿಸ್ಟೋಫರ್ ಡಿ ಸೋಜ ತಿಳಿಸಿದ್ದಾರೆ.
ಸೋಜ ಸಂಸ್ಥೆಗಳು ಗೇರು ಬೀಜದ ಉದ್ಯಮದಲ್ಲಿ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಕಚ್ಚಾ ಗೇರು ಬೀಜ ಆಮದು, ಸಂಸ್ಕರಿಸಿದ ಗೋಡಂಬಿಯ ರಫ್ತು ಉದ್ಯಮದಲ್ಲಿ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. 4ದಶಕಗಳ ಹಿಂದಿನಿಂದ ಪುತ್ತೂರು, ಮಂಗಳೂರು, ಉಡುಪಿಗಳಲ್ಲಿ ಸೊಜಾ ಸಂಸ್ಥೆ ಗೋಡಂಬಿ ಕಾರ್ಖಾನೆಗಳನ್ನು ಹೊಂದಿದೆ. ಅಮೇರಿಕಾ, ಕೆನಾಡಾ, ಜಪಾನ್, ಕೊರೊಯಾ, ವಿಯೆಟ್ನಾಂ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯೂರೋಫ್, ಆಫ್ರೀಕಾ ಖಂಡ ,ಮಧ್ಯ ಪ್ರಾಚ್ಯದೇಶಗಳು ಸೇರಿದಂತೆ ಪ್ರಪಂಚದ 40 ದೇಶಗಳಿಗೆ ಗೋಡಂಬಿ ರಪ್ತು ವಹಿವಾಟು ನಡೆಸುತ್ತಿರುವ ಸಂಸ್ಥೆಯಾಗಿದೆ. ಉದ್ಘಾಟನೆಯ ಸಂದರ್ಭದಲ್ಲಿ 500 ರೂ ಮೇಲ್ಪಟ್ಟು ಖರೀಸುವ ಗ್ರಾಹಕರಿಗೆ ಲಕ್ಕಿ ಕೂಪನ್ ವಿತರಿಸಿ ಆಯ್ಕೆ ಮಾಡಲಾಗುವುದು ,ವಿಜೇತರಿಗೆ ವಿಶೇಷ ಬಹುಮಾನ ನಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







