Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆನ್ನುಮೂಳೆ ಚಿಕಿತ್ಸೆಗಾಗಿ ಸ್ಪೈನ್ಯಾಕ್...

ಬೆನ್ನುಮೂಳೆ ಚಿಕಿತ್ಸೆಗಾಗಿ ಸ್ಪೈನ್ಯಾಕ್ ತಂತ್ರಜ್ಞಾನ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ30 Nov 2019 10:40 PM IST
share
ಬೆನ್ನುಮೂಳೆ ಚಿಕಿತ್ಸೆಗಾಗಿ ಸ್ಪೈನ್ಯಾಕ್ ತಂತ್ರಜ್ಞಾನ ಬಿಡುಗಡೆ

ಮಣಿಪಾಲ, ನ.30: ಸಂಕೀರ್ಣವಾದ ಬೆನ್ನುಮೂಳೆಗೆ ಸಂಬಂಧಿಸಿದ ರೋಗಗಳ ತಪಾಸಣೆ ಹಾಗೂ ನಿರ್ವಹಣೆಗಾಗಿ ಮಣಿಪಾಲದ ಎಂಐಟಿ, ಕೆಎಂಸಿ ಹಾಗೂ ಇತರ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ‘ಸ್ಪೈನ್ಯಾಕ್’ ತಂತ್ರಜ್ಞಾನವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಬಿಡುಗಡೆ ಗೊಳಿಸಿದರು.

ಸ್ಪೈನ್ಯಾಕ್ ತಂತ್ರಜ್ಞಾನವನ್ನು ಮಣಿಪಾಲ ಎಂಯುಟಿಬಿಐ ಇನ್‌ಕ್ಯುಬೇಟರ್ ಸಹಕಾರದಲ್ಲಿ ಕುಮುದಾ ಹೆಲ್ತ್‌ಟೆಕ್ ಪ್ರೈವೆಟ್ ಲಿ., ಎಂಐಟಿ ಮಣಿಪಾಲ ಹಾಗೂ ಮಣಿಪಾಲ ಕೆಎಂಸಿಯ ಮೂಳೆ ವಿಭಾಗ (ಅಥೋಪೆಡಿಕ್ಸ್)ಗಳು ಸಂಯುಕ್ತವಾಗಿ ಅಭಿವೃದ್ಧಿ ಪಡಿಸಿವೆ. 3ಡಿ ತಂತ್ರಜ್ಞಾನದ ಇದು ಅತೀ ಕಡಿಮೆ ವೆಚ್ಚದಲ್ಲಿ ಬೆನ್ನುಮೂಳೆಗೆ ಸಂಬಂಧಿಸಿದ ವಿವಿಧ ರೋಗಿಗಳಿಗೆ ಲಭ್ಯವಾಗುತ್ತದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಪೈನೆಕ್ಸ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿರುವುದರಿಂದ ಇನ್ನು ಮುಂದೆ ಬೆನ್ನುಮೂಳೆ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಅತಿ ಹೆಚ್ಚು ರೇಡಿಯೇಷನ್‌ನ ಅಪಾಯವಿರುವ ಸಿಟಿ ಸ್ಕಾನ್ ಹಾಗೂ ಅತೀ ವೆಚ್ಚದಾಯಕವಾದ ಎಂಆರ್‌ಐ ಸ್ಕಾನ್‌ನ ಅಗತ್ಯವಿಲ್ಲದೇ ಕೇವಲ ಎಕ್ಸರೇಯಿಂದ ತಪಾಸಣೆಗೊಳಗಾಗಿ, ಹೆಚ್ಚಿನ ವೆಚ್ಚವಿಲ್ಲದೇ ಚಿಕಿತ್ಸೆಯನ್ನೂ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.

ಬೆನ್ನುಮೂಳೆಗೆ ಸಂಬಂಧಿಸಿದ ರೋಗಗಳಲ್ಲಿ ಸ್ಕೋಲಿಯೋಸಿಸ್ ಕೂಡಾ ಒಂದಾಗಿದ್ದು, ಇದರಲ್ಲಿ ಬೆನ್ನುಮೂಳೆ ತಿರುಚುವಿಕೆ ಕಂಡುಬರುತ್ತದೆ. ಸದ್ಯಕ್ಕೆ ಇದನ್ನು ಎಕ್ಸರೇ ಮೂಲಕ ಇದರ ತಪಾಸಣೆ ನಡೆಯುತಿದ್ದು, ಈ ರೋಗ 3ಡಿಯಲ್ಲಿರುವ ಕಾರಣ, ಎಕ್ಸರೇಯಿಂದ ಪೂರ್ಣಪ್ರಮಾಣದ ತಪಾಸಣೆ ಸಾಧ್ಯ ವಾಗುವುದಿಲ್ಲ. ಸಿಟಿ ಸ್ಕಾನ್ ಹಾಗೂ ಎಂಆರ್‌ಐ ಸ್ಕಾನ್‌ನಿಂದ ಪ್ರತಿಕೂಲ ಪರಿಣಾಮ ಜಾಸ್ತಿ. ಹೀಗಾಗಿ ‘ಸ್ಪೈನ್ಯಾಕ್’ ತಂತ್ರಜ್ಞಾನ ಬಳಸಿದರೆ ಈಗಾಗಲೇ ಬಳಸಿದ ಎಕ್ಸರೇಯನ್ನು ಉಪಯೋಗಿಸಿ ಬೆನ್ನುಮೂಳೆಯ ಮೂರು ಆಯಾಮದ ಚಿತ್ರಣ (3ಡಿ) ಪಡೆಯಬಹುದು. ಇದರಿಂದ ಈಗಿನ ಚಿಕಿತ್ಸೆಯ ಹತ್ತನೇ ಒಂದರಷ್ಟು ಖರ್ಚು ಮಾತ್ರ ಬರುತ್ತದೆ ಎಂದು ಕೆಎಂಸಿಯ ಅಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಎನ್.ಶ್ಯಾಮಸುಂದರ್ ಭಟ್ ತಿಳಿಸಿದರು.

ಈ ವಿಶಿಷ್ಟ ತಂತ್ರಜ್ಞಾನವನ್ನು ಎಂಐಟಿ ಇ ಎಂಡ್ ಸಿ ವಿಭಾಗದ ಡಾ.ಸಂಪತ್ ಕುಮಾರ್, ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದ ಡಾ.ಹರೀಶ್ ಕೆ.ಎಸ್., ಡಾ. ಶ್ಯಾಮಸುಂದರ್ ಭಟ್ ಅವರು ಅಭಿವೃದ್ಧಿ ಪಡಿಸಿದ್ದಾರೆ. ಡಾ.ಸಂಪತ್‌ಕುಮಾರ್ ಹಾಗೂ ಡಾ.ಹರೀಶ್ ಅವರನ್ನೊಳಗೊಂಡ ಕುಮುದಾ ಹೆಲ್ತ್‌ಟೆಕ್ ಸಂಸ್ಥೆ ಈ ತಂತ್ರಜ್ಞಾನದ ಪೇಟೆಂಟ್ ಹೊಂದಿದೆ. ಮಣಿಪಾಲ ಕೆಎಂಸಿಯಲ್ಲಿ ಈ ಚಿಕಿತ್ಸೆ ಶೇ.50ರಷ್ಟು ರಿಯಾಯಿತಿ ಬೆಲೆಯಲ್ಲಿ ದೊರೆಯಲಿದೆ ಎಂದು ಡಾ.ಸಂಪತ್‌ಕುಮಾರ್ ಹಾಗೂ ಡಾ.ಹರೀಶ್ ತಿಳಿಸಿದರು.

ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್‌ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್, ಎಂಐಟಿ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X