ರಾಜ್ಯಮಟ್ಟದ ಸ್ಪರ್ಧೆ: ಎಸ್‌ಡಿಎಂ ಕಾಲೇಜು ಚಾಂಪಿಯನ್
ಉಡುಪಿ, ಡಿ.1: ಬೆಂಗಳೂರಿನ ಆಯುರ್ವೇದ ಅಕಾಡೆಮಿ ಸಂಸ್ಥೆಯು ಧನ್ವಂತರಿ ಜಯಂತಿಯ ಪ್ರಯುಕ್ತ ಇತ್ತೀಚೆಗೆ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಮಾಸ ರಾಜ್ಯಮಟ್ಟದ ಅಂತರ್ ಆಯುರ್ವೇದ ಕಾಲೇಜು ಸ್ಪರ್ಧೆಯಲ್ಲಿ ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ತಂಡ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದೆ.
ಕಾಲೇಜಿನ ವಿದ್ಯಾರ್ಥಿಗಳಾದ ಡಾ.ವೈಷ್ಣವಿ ಎನ್.ಕಿಣಿ, ಸುರೇಖಾ ಕಾಮತ್, ಶುಭ ಎಸ್.ಭಟ್, ಆಯುಧ ಕೆಂಭಾವಿ, ಪವಿತ್ರ ಬಿ.ಜೆ., ಮಹ್ತ ಎಂ.ಛಾತ್ರ, ಶಿವಾನಿ ಸುರೇಶ್ ಕಾರಂತ್, ಡಾ.ಪ್ರಜ್ಞಾ ಹೆಗಡೆ, ಆತ್ರೇಯ ನಾರಾಯಣ, ಸುದರ್ಶನ್, ವಿನಾಯಕ, ಡಾ.ಭಾಗ್ಯಶ್ರೀ ಕೆ., ಸನತ್ ಕುಮಾರ್, ಶ್ರೀನಿವಾಸ ನರ್ಲಿ, ಶ್ರೀನಿಕೇತ್ ಕೆ. ಈ ತಂಡದಲ್ಲಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ತಂಡವನ್ನು ಅಭಿನಂದಿಸಿದ್ದಾರೆ. ಸಾಂಸ್ಕೃತಿಕ ಸಮಿತಿಯ ಆಯೋಜಕ ಡಾ.ವಿಜಯೇಂದ್ರ ಭಟ್ ಹಾಗೂ ಡಾ.ಶ್ರೀನಿಧಿ ಧನ್ಯ, ಡಾ.ಪ್ರಶಾಂತ್ ಕೆ., ಸುಬ್ರಹ್ಮಣ್ಯ ಭಟ್, ಡಾ.ಶ್ರೀಕಾಂತ್ ಪಿ.ಎಚ್., ಡಾ.ಪ್ರಹ್ಲಾದ್ ಡಿ.ಎಸ್., ಡಾ.ಯೋಗೀಶ್ ಆಚಾರ್ಯ, ಡಾ.ಅರ್ಹಂತ್ ಕುಮಾರ್, ಡಾ ಅನಿರುದ್ಧ, ಡಾ.ನಿಶಾಂತ್ ಪೈ, ಡಾ.ಧನೇಶ್ವರಿ ಎಚ್.ಎ. ಮಾರ್ಗದರ್ಶನ ನೀಡಿದ್ದಾರೆ.