ಎಂಇಟಿ ಶಾಲಾ ವಾರ್ಷಿಕ ಕ್ರೀಡಾ ಉತ್ಸವ

ಉಡುಪಿ, ಡಿ.1: ಉದ್ಯಾವರ ಕೊರಂಗ್ರಪಾಡಿ ಎಂ.ಇ.ಟಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾ ಉತ್ಸವವು ಇತ್ತೀಚೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡಾ ಉತ್ಸವವನ್ನು ದೈಹಿಕ ನಿರ್ದೇಶಕ ಡಾ.ರಾಮಚಂದ್ರ ಪಾಡಿಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಡುಪಿ ವಲಯ ಕ್ಷೇತ್ರ ಶಿಕ್ಷಣಾ ಧಿಕಾರಿ ಮಂಜುಳಾ ಕೆ. ಮಾತನಾಡಿದರು. ಮಿಲ್ಲತ್ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಶಭೀ ಎ.ಕಾಝಿ, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಆಲ್ಬನ್ ಫ್ರಾನ್ಸಿಸ್ ಪಿಕಾರ್ಡೊ ಸ್ವಾಗತಿಸಿ ದರು. ಶಾಲಾ ಮುಖ್ಯಸ್ಥೆ ಡಾ.ಜುನೇದಾ ಸುಲ್ತಾನ ವಂದಿಸಿದರು. ಶಾಲಾ ವಿಧ್ಯಾರ್ಥಿಗಳಲ್ಲದೇ ಹಳೆ ವಿದ್ಯಾರ್ಥಿಗಳು, ಪೋಷಕರಿಗೂ ಕ್ರೀಡಾಕೂಟನ್ನು ಏರ್ಪಡಿಸಲಾಗಿತ್ತು. ಬಳಿಕ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯ ಕ್ರಮ ನಡೆಯಿತು.
Next Story





