ಪ್ರಶ್ನೆ ಕೇಳಿದ ರಾಹುಲ್ ಬಜಾಜ್ ರನ್ನೇ ತಪ್ಪಿತಸ್ಥನಂತೆ ಬಿಂಬಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ

ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸಲು ಜನ ಭಯ ಪಡುತ್ತಾರೆಂದು ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಹೇಳಿಕೆ ನೀಡಿದ್ದ ಬಜಾಜ್ ಗ್ರೂಪ್ ಅಧ್ಯಕ್ಷ ರಾಹುಲ್ ಬಜಾಜ್ ಅವರನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.
ರಾಹುಲ್ ಬಜಾಜ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹೊಗಳುತ್ತಿರುವ ಹಳೆಯ ವೀಡಿಯೋವನ್ನು ಅಮಿತ್ ಟ್ವೀಟ್ ಮಾಡಿದ್ದಾರೆ.
"ತಮಗೆ ಯಾರನ್ನೂ ಹೊಗಳಲು ಕಷ್ಟವಾಗುತ್ತಿದೆ ಎಂದು ರಾಹುಲ್ ಬಜಾಜ್ ಹೇಳಿದ್ದಾರೆ, ಆದರೆ ರಾಹುಲ್ ಗಾಂಧಿಯನ್ನು ಹೊರತುಪಡಿಸಿ. ನಿಮ್ಮ ರಾಜಕೀಯ ಸಂಬಂಧವನ್ನು ತೋರ್ಪಡಿಸಿ ಹಾಗೂ ಭಯದ ವಾತಾವರಣವಿದೆ ಎಂಬಂತಹ ಹೇಳಿಕೆಗಳ ಹಿಂದೆ ಅಡಗಿಕೊಳ್ಳಬೇಡಿ'' ಎಂದು ಮಾಳವಿಯ ಟ್ವೀಟ್ ಮಾಡಿದ್ದಾರೆ.
``ಭಯ ಪಡುವ ಅಗತ್ಯವಿಲ್ಲ, ಅಂತಹ ವಾತಾವರಣವಿದ್ದರೆ ನಾವು ಪರಿಸ್ಥಿತಿಯನ್ನು ಸುಧಾರಿಸಬೇಕಿದೆ'' ಎಂದು ರಾಹುಲ್ ಬಜಾಜ್ ಅವರನ್ನುದ್ದೇಶಿಸಿ ಅಮಿತ್ ಶಾ ನಂತರ ಹೇಳಿದ್ದರು.
‘It is difficult for me to praise anyone’, said Rahul Bajaj except off course if it is Rahul Gandhi.
— Amit Malviya (@amitmalviya) November 30, 2019
Wear your political affiliation on your sleeve and don’t hide behind inanities like there is atmosphere of fear and all that... pic.twitter.com/2JeyBzkfp8