ಉಪಚುನಾವಣೆ: 10.7 ಕೋಟಿ ರೂ. ಮೌಲ್ಯದ ಮದ್ಯ, ನಗದು ಜಪ್ತಿ

ಬೆಂಗಳೂರು, ಡಿ.2: ಉಪ ಚುನಾವಣೆ ನಡೆಯುತ್ತಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೂ ಸುಮಾರು 10.70 ಕೋಟಿ ಮೌಲ್ಯದಷ್ಟು ಮದ್ಯ, ನಗದು ಹಾಗೂ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮತದಾರರಿಗೆ ಹಂಚಿಕೆ ಮಾಡಲು ಹಾಗೂ ಇನ್ನಿತರೆ ಕೆಲಸಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.16 ಕೋಟಿ ರೂ., 4.58 ಕೋಟಿ ರೂ., ಮೌಲ್ಯದ ಮದ್ಯ ಹಾಗೂ 1.94 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ಚುನಾವಣಾ ನಿಮಿತ್ತ ನಿಯೋಜಿಸಿದ್ದ ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





