ಬಾಲಕಿಯ ಅತ್ಯಾಚಾರ ಯತ್ನ ಆರೋಪ: ಓರ್ವನ ಬಂಧನ
ಹನೂರು, ಡಿ.2: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನಲ್ಲಿ ಸೋಮವಾರ ನಡೆದಿದೆ.
ಬಸವರಾಜು(35) ಬಂಧಿತ ಆರೋಪಿ. ಈತ 5 ವರ್ಷದ ಬಾಲಕಿಗೆ ತಿಂಡಿ ಕೊಡಿಸುವುದಾಗಿ ಕರೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿಯ ಪೋಷಕರು ತಾಲೂಕಿನ ರಾಮಾಪುರ ಪೋಲಿಸರಿಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.
Next Story