ಜಮ್ಮು-ಕಾಶ್ಮೀರದ ಪ್ರಗತಿಗೆ ಜಾರ್ಖಂಡ್ ಜನತೆಯ ನೆರವು ಕೋರಿದ ಪ್ರಧಾನಿ
ಹೊಸದಿಲ್ಲಿ, ಡಿ.3: ನಾವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದ ವಿಧಿ 370ನ್ನು ರದ್ದುಪಡಿಸಿದ್ದೇವೆ...ಕಾಂಗ್ರೆಸ್ ಅವ್ಯವಸ್ಥೆಯನ್ನು ಸೃಷ್ಟಿಸಿತ್ತು. ಆದರೆ, ನಾವು ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದ್ದೆವು. ಜಮ್ಮು-ಕಾಶ್ಮೀರದ ಪ್ರಗತಿಗೆ ಜಾರ್ಖಂಡ್ ಜನತೆಯೂ ಕೈಜೋಡಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ರಾಜ್ಯದ ಖುಂಟಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮಂಗಳವಾರ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಜಾರ್ಖಂಡ್ ಬೆಳೆಯುತ್ತಿರುವ ಮಗುವಿನಂತಿದೆ. ಹೆತ್ತವರ ರೀತಿ ನಾನು ಕೂಡ ಜಾರ್ಖಂಡ್ನ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದು, ಜಾರ್ಖಂಡ್ಗಾಗಿ ಸದಾ ಕಾಲ ಕೆಲಸ ಮಾಡುತ್ತೇನೆ. ಜಾರ್ಖಂಡ್ ಜನ್ಮತಾಳಿ 19 ವರ್ಷವಾಗಿದೆ. ನೀವೆಲ್ಲರೂ ನನ್ನ ಬೆನ್ನಿಗೆ ನಿಲ್ಲಬೇಕೆಂದು ಆಶಿಸುವೆ. ಜಾರ್ಖಂಡ್ಗೆ 25 ವರ್ಷ ತುಂಬಿದಾಗ ಅದನ್ನು ಗುರುತಿಸಲು ನಿಮ್ಮಿಂದಲೂ ಸಾಧ್ಯವಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
Next Story