ತೆಲಂಗಾಣ ವೈದ್ಯೆಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಲಿ: ನ್ಯಾ.ಸಂತೋಷ್ ಹೆಗ್ಡೆ

ಬಾಗಲಕೋಟೆ, ಡಿ.3: ಹೈದರಾಬಾದ್ ಪಶುವೈದ್ಯೆಯ ಗ್ಯಾಂಗ್ ರೇಪ್ ಮತ್ತು ಹತ್ಯೆ ಮಾಡಿದ ಕಾಮುಕರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಗ್ರಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಮುಕರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆಯೂ ಸರಿಯಲ್ಲ. ಆದರೂ ಕೆಲವು ಬಾರಿ ಮಾನವೀಯ ಹಕ್ಕಿನ ಮೇಲೆ ಗಲ್ಲು ಶಿಕ್ಷೆ ಬೇಡ ಎಂದು ವಾದ ಮಾಡುತ್ತಾರೆ. ಇದು ಮಾನವೀಯತೆ ಇಲ್ಲದ ಕ್ರೂರವಾದಂತಹ ಕೃತ್ಯ. ಆದ್ದರಿಂದ ಇಂತಹ ಘಟನೆಯಾದಾಗ ಗಲ್ಲು ಶಿಕ್ಷೆಯೇ ಆಗಬೇಕು. ಅದು ವಿಳಂಬವಾಗಬಾರದು ತೀವ್ರಗತಿಯಲ್ಲಿ ತೀರ್ಪು ಪ್ರಕಟವಾಗಬೇಕು. ತಡವಾದರೆ ಅದರ ಪ್ರಾಮುಖ್ಯತೆ ಹೋಗುತ್ತದೆ ಎಂದು ಹೇಳಿದರು.
Next Story





