ಅಂಗಡಿಗಳಿಗೆ ದಾಳಿ: ನಿಷೇಧಿತ ಪ್ಲಾಸ್ಟಿಕ್, ಸೊತ್ತು ವಶ

ಉಡುಪಿ, ಡಿ.4: ಉಡುಪಿ ನಗರ ಮತ್ತು ಮಣಿಪಾಲದ ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ಹೂವಿನ ಅಂಗಡಿ, ಜನರಲ್ ಸ್ಟೋರ್ ಸಹಿತ ವಿವಿಧ ಅಂಗಡಿಗಳಿಗೆ ಉಡುಪಿ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡಿದೆ.
ವಿವಿಧ ಅಂಗಡಿಗಳಿಂದ ಒಟ್ಟು 12ಕೆ.ಜಿ. ನಿಷೇಧಿತ ಪ್ಲಾಸ್ಟಿಕ್, ಥರ್ಮಾ ಕೋಲ್, ಗಿಫ್ಟ್ ರ್ಯಾಪರ್, ಹೂಗುಚ್ಛದ ಪ್ಲಾಸ್ಟಿಕ್, ಸ್ಟ್ರಾ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ. ಈ ಅಂಗಡಿಗಳಿಂದ ಒಟ್ಟು 7000ರೂ. ದಂಡ ವಸೂಲಿ ಮಾಡಲಾಗಿದೆ.
ನಗರಸಭೆ ಪರಿಸರ ಅಭಿಯಂತರ ಸ್ನೇಹ ನೇತೃತ್ವದ ತಂಡದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಕರುಣಾಕರ ಮತ್ತು ಶಶಿರೇಖಾ, ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ, ಸ್ಯಾನಿಟರಿ ಸೂಪರ್ವೈಸರ್ ದಾಮೋದರ್ ಮತ್ತು ನಾಗಾರ್ಜುನ ಭಾಗವಹಿಸಿದ್ದರು.
Next Story