ಮೂಡುಬಿದಿರೆ : ಖಾಸಗಿ ಬಸ್ ಪಲ್ಟಿ; 18 ಮಂದಿಗೆ ಗಾಯ
![ಮೂಡುಬಿದಿರೆ : ಖಾಸಗಿ ಬಸ್ ಪಲ್ಟಿ; 18 ಮಂದಿಗೆ ಗಾಯ ಮೂಡುಬಿದಿರೆ : ಖಾಸಗಿ ಬಸ್ ಪಲ್ಟಿ; 18 ಮಂದಿಗೆ ಗಾಯ](https://www.varthabharati.in/sites/default/files/images/articles/2019/12/5/222382-1575561016.jpg)
ಮೂಡುಬಿದಿರೆ : ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗುರುವಾರ ಸಂಜೆ ಆಲಂಗಾರು ಸಮೀಪ ನಡೆದಿದ್ದು, ಘಟನೆಯಿಂದ 18 ಮಂದಿ ಗಾಯಗೊಂಡಿದ್ದಾರೆ.
ಕೊಲ್ಲೂರಿನಿಂದ ಮಂಗಳೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಬಸ್ ಆಲಂಗಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾಗಿದ್ದು, ಈ ಸಂದರ್ಭ ಮೂಡುಬಿದಿರೆ ಗಾಂಧಿನಗರದ ಸುಮಾ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.