ಸರಕಾರದಿಂದ ಸಹಾಯ ದೊರೆಯದೇ ಇದ್ದರೆ ವೊಡಾಫೋನ್-ಐಡಿಯಾ ಬಾಗಿಲು ಮುಚ್ಚಬೇಕಾಗುತ್ತದೆ: ಕೆ.ಎಂ. ಬಿರ್ಲಾ
ಕುಮಾರ್ ಮಂಗಲಂ ಬಿರ್ಲಾ (Photo: freepressjournal)
ಹೊಸದಿಲ್ಲಿ : ವೊಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಕೋರಿದ ಸಹಾಯವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ನೀಡದೇ ಇದ್ದರೆ ಸಂಸ್ಥೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಹೇಳಿದ್ದಾರೆ.
ರಾಜಧಾನಿ ದಿಲ್ಲಿಯಲ್ಲಿ ಹಿಂದುಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮಾವೇಶದಲ್ಲಿ ಅವರಿಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.
ಸರಕಾರದಿಂದ ಯಾವುದೇ ರೀತಿಯಲ್ಲಿ ಪರಿಹಾರ ಬಾರದ ಹೊರತು ಕಂಪೆನಿ ಭಾರತದಲ್ಲಿ ಇನ್ನಷ್ಟು ಹಣ ಹೂಡಿಕೆ ಮಾಡುವುದಿಲ್ಲವೆಂದು ವೊಡಾಫೋನ್ ಮುಖ್ಯಸ್ಥ ನಿಕ್ ರೀಡ್ ಹೇಳಿದ್ದನ್ನೇ ಬಿರ್ಲಾ ಪುನರುಚ್ಛರಿಸಿದ್ದಾರೆಂದು ಹೇಳಬಹುದು.
ಪರಿಹಾರ ದೊರೆಯದೇ ಇದ್ದರೆ ಸಂಸ್ಥೆ ದಿವಾಳಿಯಾಗಿದೆ ಎಂದು ಘೋಷಿಸಬೇಕಾಗುತ್ತದೆ ಎಂದು ಬಿರ್ಲಾ ಹೇಳಿದರು. ಬಿರ್ಲಾ ಅವರ ಹೇಳಿಕೆಯ ಬೆನ್ನಲ್ಲೇ ಸಂಸ್ಥೆಯ ಷೇರುಗಳ ಬೆಲೆ ಶೇ 9ರಷ್ಟು ಕುಸಿತ ಕಂಡರೂ ನಂತರ ಸುಧಾರಿಸಿಕೊಂಡಿತು.
Next Story