ದೊಣ್ಣೆಯಿಂದ ಹೊಡೆದು ಸಹೋದರನ ಪತ್ನಿಯ ಕೊಲೆ

ಮಡಿಕೇರಿ, ಡಿ.7: ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಶಾಲನಗರದ ಸಮೀಪದ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ.
ಕುಶಾಲನಗರ ಸಮೀಪದ ರಂಗಸಮುದ್ರದ ಉಳುವಾರನ ಬಿಪಿನ್ ಕುಮಾರ್ (39) ತನ್ನ ಸಹೋದರ ರಂಜನ್ ಎಂಬವರ ಪತ್ನಿ ಯಶೋಧ (32) ಎಂಬಾಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.
Next Story





