ವೆನ್ಲಾಕ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮಂಗಳೂರು : ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸತ್ವಾ ಬಾಯ್ಸ್ ದುಬೈ ಹಾಗೂ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ರಾಜೇಶ್ವರಿ ದೇವಿ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಸುಜಾಹ್ ಮಹಮ್ಮದ್, ಇರ್ಶಾದ್ ತುಂಬೆ, ಡಾ. ಮುಬಶ್ಶಿರ್, ಅಬ್ದುಲ್ ಸಮದ್, ಮುಹಮ್ಮದ್ ಶಮೀಮ್, ಅಬ್ದುಲ್ ಗಫಾರ್, ಶುಹೈಬ್ ಮುಹಮ್ಮದ್, ನಿಝಾರ್ ಮುಹಮ್ಮದ್, ಯೂಸುಫ್ ಫರಂಗಿಪೇಟೆ, ಮುಹಮ್ಮದ್ ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯಡಿ ರೋಗಿಗಳ ಜೊತೆಗಾರರಿಗೆ ರಾತ್ರಿಯ ಉಪಹಾರವನ್ನು ವಿತರಿಸಲಾಯಿತು.
Next Story