ಮೈಸೂರು: ವಿದ್ಯುತ್ ತಗಲಿ ವ್ಯಕ್ತಿ ಸಾವು
ಮೈಸೂರು,ಡಿ.7: ಯುಪಿಎಸ್ ಬಳಿ ಸ್ವಚ್ಛ ಮಾಡುವ ವೇಳೆ ವಿದ್ಯುತ್ ತಗಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಲಷ್ಕರ್ ಮೊಹಲ್ಲಾದ ಗುಜರಿ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ನವೀನ್(37) ಎಂದು ಗುರುತಿಸಲಾಗಿದ್ದು, ಯುಪಿಎಸ್ ಬಳಿ ಸ್ವಚ್ಚ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story