ಉಡುಪಿಯಲ್ಲಿ ಸೇವಾದಳದ ರಾಜ್ಯಮಟ್ಟದ ಮಕ್ಕಳ ಮೇಳಕ್ಕೆ ಚಿಂತನೆ
ತಾಲೂಕು ಮಕ್ಕಳ ಮೇಳದ ಸಮಾರೋಪದಲ್ಲಿ ಯು.ಆರ್.ಸಭಾಪತಿ

ಶಿರ್ವ, ಡಿ.8: ಭಾರತ ಸೇವಾದಳದ ಮೂಲ ಧ್ಯೇಯೋದ್ಧೇಶಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನವರಿ ಅಂತ್ಯದಲ್ಲಿ ಉಡುಪಿಯಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳವನ್ನು ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಭಾರತ ಸೇವಾದಳ ಉಡುಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಯು.ಆರ್.ಸಭಾಪತಿ ತಿಳಿಸಿದ್ದಾರೆ.
ಉಡುಪಿ ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಭಾರತ ಸೇವಾ ದಳದ ಮಾರ್ಗದರ್ಶನದಲ್ಲಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ನಿರ್ದೇಶನದಲ್ಲಿ ಭಾರತ ಸೇವಾದಳ ಉಡುಪಿ ತಾಲೂಕು ಸಮಿತಿ, ಶಂಕರಪುರ ಮಕ್ಕಳ ಮೇಳ ಸಮಿತಿ, ಸೈಂಟ್ ಜೋನ್ಸ್ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಂಕರಪುರ ಶಾಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತ ನಾಡಿ, ಸೇವಾದಳದ ಮೂಲಕ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಭಾವೈಕ್ಯತೆಯ ಶಿಕ್ಷಣ ನೀಡಿ ಭವಿಷ್ಯದ ಶಿಸ್ತುಬದ್ಧ ರಾಷ್ಟ್ರರಕ್ಷಕರನ್ನು ತಯಾರು ಮಾಡುತ್ತಿದೆ ಎಂದು ತಿಳಿಸಿದರು.
ಮೇಳದ ಸಂಘಟನಾ ಸಮಿತಿಯ ನವೀನ್ ಅಮೀನ್ ಶಂಕರಪುರ ಮಾತ ನಾಡಿದರು. ಈ ಸಂದರ್ಭದಲ್ಲಿ ಮಕ್ಕಳ ಮೇಳದ ಸಂಚಾಲಕಿ ಮಾಲಿನಿ ಶೆಟ್ಟಿ ದಾನಿಗಳನ್ನು ಗೌರವಿಸಿದರು. ವಿವಿಧ ಸ್ಫರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ ವಾಜ್, ಜಿಲ್ಲಾ ದೈಹಿಕ ಶಿಕ್ಷಣ ಪರಿ ವೀಕ್ಷಣಾಧಿಕಾರಿ ಮಧುಕರ್ ಎಸ್., ಗ್ರಾಪಂ ಅಧ್ಯಕ್ಷೆ ಜ್ಯೂಲಿಯಟ್ ವೀರಾ ಡಿಸೋಜ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಶ್ವನಾಥ್ ಬಾಯಿರಿ, ಸೇವಾದಳ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಪುಂಡಲೀಕ ಮರಾಠೆ, ಹೆರಾಲ್ಡ್ ಡಿಸೋಜ, ಉದ್ಯಮಿ ವಿನ್ಸೆಂಟ್ ರೊಡ್ರಿಗಸ್, ರಾಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನದಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ವಿವಿಧ ವ್ಯಾಯಾಮಗಳ ಪ್ರದರ್ಶನ, ರಾಷ್ಟ್ರೀಯ ಬಾವೈಕ್ಯತಾ ಗೀತಾಭಿನಯ, ವಿವಿಧ ಪ್ರದರ್ಶನಗಳು ಸಂಪನ್ನಗೊಂಡವು. ಬಾರತ ಸೇವಾದಳ ತಾಲೂಕು ಮಾಜಿ ಅಧ್ಯಕ್ಷ ಕೆ.ನಾಗೇಶ ಭಟ್ ಧ್ವಜಾವರೋಹಣ ನೆರವೇರಿಸಿದರು. ಪ್ರೌಢ ಶಾಲಾ ಮುಖ್ಯಶಿಕ್ಷಕ ಅಶ್ವಿನ್ ರೊಡ್ರಿಗಸ್ ಸ್ವಾಗತಿಸಿದರು. ಜಿಲ್ಲಾ ಸಂಘಟಕ ಪಕ್ಕೀರಗೌಡ, ತಾಲೂಕು ಅಧಿನಾಯಕ ಎಸ್.ಎಸ್. ಪ್ರಸಾದ್, ಅಧಿನಾಯಕಿ ರಾಜೇಶ್ವರಿ ಸಹಕರಿಸಿದರು. ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಳದ ಸಹಕಾರ್ಯ ದರ್ಶಿ ಡಿ.ಆರ್.ನೊರೋನ್ಹಾ ವಂದಿಸಿದರು.







