ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ, ಡಿ.9: ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಆಸಕ್ತ ಮಹಿಳೆ/ಯುವತಿಯರಿಗೆ ಡಿ.16ರಿಂದ 20ರವರೆಗೆ ಗೃಹ ಉತ್ಪನ್ನಗಳಾದ ಸಾರು, ಸಾಂಬಾರು ಮತ್ತು ಕಷಾಯ ಹುಡಿ, ಹಪ್ಪಳ, ಜ್ಯಾಮ್, ಸೆಂಡಿಗೆ, ಉಪ್ಪಿನ ಕಾಯಿ, ಫಿನಾಯಿಲ್ ತಯಾರಿ ಹಾಗೂ ಪೇಪರ್, ಬಟ್ಟೆ ಕೈಚೀಲ ತಯಾರಿ, ಕರಕುಶಲತೆ ಇತ್ಯಾದಿಗಳ ಕುರಿತು ಐದು ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಪಾಲ್ಗೊಳ್ಳಲು ಆಸ್ತಕ ಮಹಿಳೆಯರು ಡಿ.13ರೊಳಗೆ ಕೆಳಗಿನ ದೂರವಾಣಿ ಸಂಪರ್ಕಿಸುವ ಮೂಲಕ ಭಾಗವಹಿಸು ವುದನ್ನು ದೃಢೀಕರಿಸಬೇಕು ಹಾಗೂ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಡಿ.16ರಂದು ಬೆಳಗ್ಗೆ 9:30ಕ್ಕೆ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಹಾಜರಿರಬೇಕು ಎಂದು ಬಿವಿಟಿ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬೇಕಾದ ವಿಳಾಸ: ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ- ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ, ಉಡುಪಿ-2. (ದೂರವಾಣಿ ಸಂಖ್ಯೆ: 0820-2570263, 2570262)
Next Story