ಶೈನ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಪುನರ್ ರಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಹಾಗು ಮಂಗಳೂರು ಪರಿಸರದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿರುವ ಶೈನ್ ಸ್ಪೋರ್ಟ್ಸ್ ಕ್ಲಬ್ ಪುನರ್ ರಚನೆಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಶೈನ್ ಮಂಗಳೂರು ತಂಡ ಯಾವುದೇ ಕ್ರಿಕೆಟ್ ಪಂದ್ಯಕೂಟದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಇತನ್ಮದ್ಯೆ ತಂಡದ ಹಿರಿಯ ಅನುಭವಿ ಆಟಗಾರರು ಹಾಗು ವ್ಯವಸ್ಥಾಪಕರ ಒತ್ತಡದ ಮೇರೆಗೆ ಶೈನ್ ಮಂಗಳೂರು ತಂಡ ಆಹ್ವಾನಿತ ಕ್ರಿಕೆಟ್ ಪಂದ್ಯ ಕೂಟಕ್ಕೆ ಪಾದಾರ್ಪಣೆ ಮಾಡಲಿದೆ. ತಂಡದ ಕಪ್ತಾನನಾಗಿ ಅಬ್ದುಲ್ ಸತ್ತಾರ್ ಕುಕ್ಕಾಜೆ ಹಾಗು ಇಮ್ತಿಯಾಝ್ ಉಳ್ಳಾಲ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story