ಮಲೇಶಿಯಾದಲ್ಲಿ ನಡೆದ ಮಾಸ್ಟರ್ ಅತ್ಲೆಟಿಕ್ಸ್ ನಲ್ಲಿ ಶುಭ ಕೆ.ಎಚ್.ಗೆ ಬೆಳ್ಳಿ
![ಮಲೇಶಿಯಾದಲ್ಲಿ ನಡೆದ ಮಾಸ್ಟರ್ ಅತ್ಲೆಟಿಕ್ಸ್ ನಲ್ಲಿ ಶುಭ ಕೆ.ಎಚ್.ಗೆ ಬೆಳ್ಳಿ ಮಲೇಶಿಯಾದಲ್ಲಿ ನಡೆದ ಮಾಸ್ಟರ್ ಅತ್ಲೆಟಿಕ್ಸ್ ನಲ್ಲಿ ಶುಭ ಕೆ.ಎಚ್.ಗೆ ಬೆಳ್ಳಿ](https://www.varthabharati.in/sites/default/files/images/articles/2019/12/11/223139-1576061906.jpg)
ಕೊಣಾಜೆ : ಮಲೇಶಿಯಾದ ಸಾರಾವಾಕ್ ಕುಚೆಂಗ್ನ, ನಗೇರಿ ಸ್ಟೇಡಿಯಂನಲ್ಲಿ ನಡೆದ 21ನೇ ಏಷಿಯಾ ಮಾಸ್ಟರ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ 2019 ಇದರಲ್ಲಿ ಭಾರತವನ್ನು ಪ್ರತಿನಿಧಿಸಿದ ಶುಭ ಕೆ.ಎಚ್ ಅವರು ಟ್ರಿಪಲ್ ಜಂಪ್ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.
ಮಂಗಳೂರಿನ ಜೆಪ್ಪು ನಿವಾಸಿಯಾಗಿರುವ ಇವರು ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ. ನಿವೃತ್ತ ಎಎಸ್ಐ ಶಿವರಾಮ ಮತ್ತು ಸುಲೋಚನ ಇವರ ಪುತ್ರಿಯಾಗಿರುವ ಇವರು ಪ್ರಶಾಂತ್ ನುಳ್ಳಿಪ್ಪಾಡಿಯವರ ಪತ್ನಿ.
Next Story