ಮಂಗಳೂರು: ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು 15 ಲಕ್ಷ ರೂ. ದರೋಡೆ
![ಮಂಗಳೂರು: ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು 15 ಲಕ್ಷ ರೂ. ದರೋಡೆ ಮಂಗಳೂರು: ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು 15 ಲಕ್ಷ ರೂ. ದರೋಡೆ](https://www.varthabharati.in/sites/default/files/images/articles/2019/12/13/223444-1576225202.gif)
ಮಂಗಳೂರು, ಡಿ.13: ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು ಕಾರಿನೊಳಗಿದ್ದ 15 ಲಕ್ಷ ರೂ. ದರೋಡೆಗೈದ ಘಟನೆ ನಗರದ ಚಿಲಂಬಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಹಣದ ವಾರಸುದಾರರು ಕಾರನ್ನು ಚಿಲಿಂಬಿಯಲ್ಲಿ ಪಾರ್ಕ್ ಮಾಡಿ ಡೋರ್ ಲಾಕ್ ಮಾಡಿ ಸೌತ್ ಇಂಡಿಯಾ ಬ್ಯಾಂಕಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಕಾರಿನ ಹಿಂಬದಿ ಸೀಟಿನ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ 15 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದರೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.