Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುದು-ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ...

ಪುದು-ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಯೋಗ್ಯ ವಾತಾವರಣದ ಜೊತೆಗೆ ಗುಣಮಟ್ಟದ ಶಿಕ್ಷಣ

ನಲಿ-ಕಲಿಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದ ಕೀರ್ತಿ

ಅಬ್ದುಲ್ ರಹಿಮಾನ್ ತಲಪಾಡಿಅಬ್ದುಲ್ ರಹಿಮಾನ್ ತಲಪಾಡಿ13 Dec 2019 2:34 PM IST
share
ಪುದು-ಮಾಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ:  ಯೋಗ್ಯ ವಾತಾವರಣದ ಜೊತೆಗೆ ಗುಣಮಟ್ಟದ ಶಿಕ್ಷಣ


ಬಂಟ್ವಾಳ, ಡಿ.12: ವರ್ಷಂಪ್ರತಿ ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆಗಳ ಬಗ್ಗೆ ಪಾಲಕರ ನಿರಾಸಕ್ತಿ, ಇವೆರಡರ ನಡುವೆಯೂ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದ ಮೂಲಕ ಈ ಪ್ರದೇಶದ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎಂಬಂತೆ ಬೆಳೆದು ನಿಂತಿದೆ. ಗುಣಮಟ್ಟದ-ಪರಿಣಾಮಕಾರಿ ಬೋಧನೆಗೆ ವಿಭಿನ್ನ ಪರಿಕಲ್ಪನೆಗಳು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರದ ಜೊತೆ ಸಾರ್ವಜನಿಕರ ಹಾಗೂ ಸ್ಥಳೀಯ ಸಮಾಜ ಸೇವಾ ಸಂಸ್ಥೆಯ ಸಹಭಾಗಿತ್ವ ಹೊಂದಿದ್ದು, ಒಟ್ಟಿನಲ್ಲಿ ಖಾಸಗಿ ಶಾಲೆಗಿಂತ ಮೇಲ್ಮಟ್ಟದಲ್ಲಿದೆ.

ನಲಿ-ಕಲಿಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನ:

ಬಂಟ್ವಾಳ ತಾಲೂಕಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ದ.ಕ. ಜಿಪಂ ಹಿ.ಪ್ರಾ. ಪುದು-ಮಾಪ್ಲ ಸರಕಾರಿ ಶಾಲೆ ಇಲ್ಲಿನ ಶಿಕ್ಷಕಿ ಜ್ಯೋತಿ ಎಂಬವರ ಪರಿಶ್ರಮದಿಂದ 2018-19ನೇ ಸಾಲಿನ ನಲಿ-ಕಲಿಯಲ್ಲಿ ರಾಜ್ಯ ಮಟ್ಟದಲ್ಲೇ 2ನೇ ಸ್ಥಾನ ಗಳಿಸುವ ಮೂಲಕ ವಿಶೇಷ ಗಮನಸೆಳೆದಿದೆ. ಸುತ್ತಲೂ 10 ಕಿ.ಮೀ. ವ್ಯಾಪ್ತಿಯಲ್ಲಿ ಶಾಲೆಗಳೇ ಇಲ್ಲದ ದಿನಗಳಲ್ಲಿ ಈ ಊರಿನ ಹಿರಿಯರೆಲ್ಲಾ ಸೇರಿ ಮುಳಿಹುಲ್ಲಿನ ಕಟ್ಟಡ ವೊಂದರಲ್ಲಿ 1902ರಲ್ಲಿ ಈ ಶಾಲೆ ಪ್ರಾರಂಭಗೊಂಡಿದ್ದು, 117 ವರ್ಷ ಕಳೆದಿದೆ. ಒಂದರಿಂದ 5ರವರೆಗೆ ತರಗತಿಗಳನ್ನು ಹೊಂದಿದ್ದ ಈ ಶಾಲೆಯಲ್ಲಿ ಪ್ರಾರಂಭದಲ್ಲಿ 25 ವಿದ್ಯಾರ್ಥಿಗಳ ಮೂಲಕ ಆರಂಭಗೊಂಡ ಶಾಲೆಯಲ್ಲಿ 1975ರ ವೇಳೆ ವಿದ್ಯಾರ್ಥಿಗಳ ಸಂಖ್ಯೆ ಮುನ್ನೂರುದಾಟಿದ್ದು, ಬಳಿಕ 1995ರ ವೇಳೆ ವಿದ್ಯಾರ್ಥಿಗಳ ಸಂಖ್ಯೆ 500ನ್ನೂ ದಾಟಿತ್ತು. ಆದರೆ, 2014ಕ್ಕೆ ವಿದ್ಯಾರ್ಥಿಗಳ ಸಂಖ್ಯೆ 49ಕ್ಕೆ ಇಳಿದಿತ್ತು. ಈ ವಿಚಾರವನ್ನು ಮನಗಂಡ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡ ಹಾಗೂ ಇಲ್ಲಿನ ಸಮಾಜಿಕ ಸಂಸ್ಥೆಯಾದ ಫರಂಗಿಪೇಟೆಯ ಟುಡೇ ಫೌಂಡೇಶನ್ ಶಾಲೆಯ ಎಲ್ಲಾ ವ್ಯವಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದೆ.

ಬಳಿಕ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮನೆ ಮನೆ ಭೇಟಿಯ ಅಭಿಯಾನ ಕೈಗೊಂಡು ಪ್ರಸ್ತುತ ಎಲ್‌ಕೆಜಿ-ಯುಕೆಜಿಯಲ್ಲೇ 83 ವಿದ್ಯಾರ್ಥಿಗಳು, 1ರಿಂದ 8ನೇ ತರಗತಿಯಲ್ಲಿ 178 ಸೇರಿ ಒಟ್ಟು 261 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಈ ಪೈಕಿ ಶೇ. 98ರಷ್ಟು ವಿದ್ಯಾರ್ಥಿಗಳು ಮುಸ್ಲಿಮರು.
 
 ಪ್ರತಿಭಾ ಕಾರಂಜಿಯಲ್ಲಿ ಸಾಧನೆ:

ಪುದು ಮಾಪ್ಲ ಶಾಲೆಯ ವಿದ್ಯಾರ್ಥಿಗಳು ಅತಿ ಬುದ್ಧಿವಂತರಾಗಿದ್ದು, ಪಾಠ ಹಾಗೂ ಆಟಗಳಲ್ಲೂ ಮುಂದು. ಕಳೆದ ಕೆಲ ತಿಂಗಳಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ 27 ಸ್ಪರ್ಧೆಯಲ್ಲಿ 17 ಪ್ರಶಸ್ತಿಯನ್ನು ತರುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು, ತಾಲೂಕಿಗೆ ಹೆಮ್ಮೆಯ ವಿಚಾರ. ಪಠ್ಯೇತರ ಚಟುವಟಿಕೆಗಳಿಗೂ ಪೂರಕವಾದ ಸಾಮಾಗ್ರಿ ಗಳಿಗೆ ಮೀಸಲಿರಿಸಲಾಗಿದೆ. ಪ್ರತೀ ತರಗತಿಗೂ ಡಿಸ್ಪೇಬೋರ್ಡ್ ಅಳವಡಿಸಲಾಗಿದೆ ಎಂದು ಟುಡೇ ಪೌಂಡೇಶನ್‌ನ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಹೇಳುತ್ತಾರೆ .

ಸಕಲ ಸೌಲಭ್ಯಗಳಿವೆ:
ಸದ್ಯ ಶಾಲೆಯು 70 ಸೆಂಟ್ಸ್ ನಿವೇಶನ ಹೊಂದಿದ್ದು, ಸುಸಜ್ಜಿತ ಆರ್‌ಸಿಸಿ ಕಟ್ಟಡದ ಕೊಠಡಿಗಳು, ತೆಂಗಿನಮರಗಳು, ತೆರೆದ ಬಾವಿ, ನಳ್ಳಿ ನೀರು, ವಿಶೇಷ ಮಕ್ಕಳಿಗೂ ಸೇರಿದಂತೆ ಪ್ರತ್ಯೇಕ ಶೌಚಾಲಯಗಳು ಒಳಗೊಂಡು ಕಲಿಕಗೆ ಯೋಗ್ಯ ವಾತಾವರಣ ಇಲ್ಲಿದೆ. ಅದಲ್ಲದೆ, ಶಾಸಕ ಯು.ಟಿ.ಖಾದರ್ ವಿಶೇಷ ಅನುದಾನದಿಂದ ಶಾಲೆಯ 2ನೇ ಅಂತಸ್ತು ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ಸುಸಜ್ಜಿತ ಸಭಾಂಗಣ, ಕೊಠಡಿ ನಿರ್ಮಾಣ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ಕಂಪ್ಯೂಟರ್ ಹಾಗೂ ಕ್ರೀಡಾಕೊಠಡಿ-ಸಾಮಗ್ರಿಗಳ ಬೇಡಿಕೆಯೊಂದೇ ಈ ಶಾಲೆಯದ್ದು.

ಮೌಲಾನ ಆಝಾದ್ ಮಾದರಿ ಶಾಲೆ:
2018-19ನೇ ಸಾಲಿಗೆ ಈ ಶಾಲೆಯಲ್ಲಿ ಮೌಲಾನ ಆಝಾದ್‌ಮಾದರಿ ಶಾಲೆಯನ್ನು ಆರಂಭಿಸಲಾಗಿದೆ. 6ನೇ ತರಗತಿಯಲ್ಲಿ 37 ವಿದ್ಯಾರ್ಥಿಗಳು ಹಾಗೂ 7ನೇ ತರಗತಿಯಲ್ಲಿ 41 ಸೇರಿ ಒಟ್ಟು 78 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಮೌಲಾನ ಆಝಾದ್ ಮಾದರಿ ಶಾಲೆಗಳನ್ನು ಆರಂಭಿಸುವ ಮೂಲಕ ಉತ್ತಮ ಭವಿಷ್ಯ ನೀಡುತ್ತಿದೆ.

ಟುಡೇ ಸಹಭಾಗಿತ್ವ:
ಶಾಲೆ ಸಾರ್ವಜನಿಕರ ಸ್ವತ್ತು. ಸರಕಾರದ ಜೊತೆ ಸಾರ್ವಜನಿಕರ ಪಾತ್ರವೂ ಇರಬೇಕು ಎನ್ನುವುದಕ್ಕೆ ಇಲ್ಲಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ವಿದ್ಯಾಭಿಮಾನಿಗಳ ಸಹಕಾರ ಪಡೆದುಕೊಂಡಿದ್ದು, ಇದಕ್ಕಾಗಿ ಇಲ್ಲಿನ ಟುಡೇ ಫೌಂಡೇಶನ್ ಸಂಸ್ಥೆ ಒಂದು ಹೆಜ್ಜೆ ಮುಂದಿಟ್ಟಿದೆ. ಶಾಲೆಗೆ ಪೀಠೋಪಕರಣಗಳು, ಸಮವಸ್ತ್ರ ಹೀಗೆ ಗುಣಮಟ್ಟದ ಬೋಧನೆಯಿಂದ ಶಾಲೆ ಗ್ರಾಮದ ಅಮೂಲ್ಯ ಆಸ್ತಿಯಾಗಿ ಬೆಳೆಯುತ್ತಿದೆ. ಟುಡೇ ಫೌಂಡೇಶನ್ ಸಂಸ್ಥೆಯ ಸಹಭಾಗಿತ್ವ, ಶಿಕ್ಷಕರ ದೂರಗಾಮಿ ಚಿಂತನೆಗಳು, ವಿದ್ಯಾರ್ಥಿಗಳ ಸಕರಾತ್ಮಕ ಸ್ಪಂದನೆ ಈ ಬೆಳವಣಿಗೆಗಳಿಗೆ ಕಾರಣವಾಗಿದೆ. ಮಕ್ಕಳ ಕೊರತೆಯ ಕೂಗು ಕೇಳಿ ಬರುತ್ತಿರುವ ಸರಕಾರಿ ಶಾಲೆಗಳಿಗೆ ಇದೊಂದು ಆತ್ಮ ವಿಶ್ವಾಸದ ಹೊಸ ಪ್ರಯತ್ನವಾಗಿದೆ.


ಈ ಶಾಲೆಯಲ್ಲಿ ಆರು ಶಿಕ್ಷಕರು ಬೋಧನೆ ಮಾಡುತ್ತಿದ್ದು, ಟುಡೇ ಸಂಸ್ಥೆಯು ಹೆಚ್ಚುವರಿ ಶಿಕ್ಷಕರನ್ನು ನೇಮಿಸಿದೆ. ಅಲ್ಲದೆ, ಶಿಕ್ಷಕರಿಗೆ ತಿಂಗಳಿಗೆ ಗೌರವಧನ ನೀಡಲಾಗುತ್ತಿದೆ. ಚಿನ್ನರ ಮನೆಗೆ ವಿಶೇಷ ಒತ್ತು ನೀಡಲಾಗಿದ್ದು, ಸುಮಾರು ವಿವಿಧ ಖಾಸಗಿ ಶಾಲೆಗಳಿಂದ 31 ಮಕ್ಕಳು ನೋಂದಣಿಯಾಗಿದ್ದಾರೆ. ಒಂದು ಹಂತದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಇಳಿಕೆಯಾಗಿದ್ದ ಪುದು ಶಾಲೆಯಲ್ಲಿ ಸದ್ಯ ವಿದ್ಯಾರ್ಥಿಗಳ ಸಂಖ್ಯೆ 261ಕ್ಕೆ ತಲುಪಿದೆ. ಎಲ್ಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಕಲಿಕೆಗೆ ಯೋಗ್ಯ ವಾತಾವರಣದ ಜತೆಗೆ ಗುಣಮಟ್ಟದ ಶಿಕ್ಷಣವೂ ಲಭ್ಯವಾಗುತ್ತಿದೆ.
-ಶಕುಂತಳಾ ಎಸ್. ಉಳ್ಳಾಲ್, ಮುಖ್ಯಶಿಕ್ಷಕಿ


ಹಿಂದೆ ಕಷ್ಟದ ದಿನಗಳಿದ್ದ ಕಾಲಘಟ್ಟದಲ್ಲಿ ಪುದು ಶಾಲೆಯಲ್ಲಿ ಕೇವಲ 28 ಮಕ್ಕಳ ಸಂಖ್ಯೆ ಇತ್ತು. ಆ ಸಮಯದಲ್ಲಿ ಟೆಂಟ್‌ನಲ್ಲಿ ವಾಸವಾಗಿದ್ದ ವಲಸೆ ಮಕ್ಕಳನ್ನು ಶಾಲೆಗೆ ಸೇರಿಸಿ ಮ್ಕಕಳ ಸಂಖ್ಯೆ ಹೆಚ್ಚಿ ಸಲಾಗಿತ್ತು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದವು. ನಾವು ಟುಡೇ ಫೌಂಡೇಶನ್ ಮೂಲಕ ಚಿಣ್ಣರ ಮನೆ ಸ್ಥಾಪಿಸಿ ಆಂಗ್ಲ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಬಳಿಕ ಶಿಕ್ಷಕರು ಸೇರಿದಂತೆ ಎಲ್ಲರ ಶ್ರಮದ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. 1ನೇ ಆಂಗ್ಲ ಮಾಧ್ಯಮ ಮಕ್ಕಳ ಬರವಣಿಗೆ, ಕಲಿಕೆ ಹಾಗೂ ಪಠ್ಯೇತರ ಚುಟವಟಿಕೆಗಳು ಗಮನಿಸಿದರೆ ಈ ಭಾಗದ ಇತರ ಶಾಲೆಯ ಮಕ್ಕಳಲ್ಲೂ ಕಾಣಸಿಗದು.
-ಉಮರ್ ಫಾರೂಕ್ ಟುಡೇ ಫೌಂಡೇಶನ್‌ನ ಅಧ್ಯಕ್ಷ


ನಮ್ಮ ಮ್ಕಕಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪೋಷಕರ ಗೌರವವನ್ನು ಹೆಚ್ಚಿ ಸಬೇಕೆಂಬುವುದು ಎಲ್ಲಾ ಹೆತ್ತವರ ಕನಸು. ಅದಲ್ಲದೆ, ಸ್ಪರ್ಧಾತ್ಮಕ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವೂ ಕೂಡಾ, ಹೀಗಾಗಿ ದುಬಾರಿ ಡೊನೇಶನ್ ಕೊಟ್ಟು ಪ್ರತಿಷ್ಠಿತ ಶಾಲೆಗೆ ನನ್ನ ಮಗನನ್ನು ಸೇರಿಸಿದ್ದೆ. ಪಕ್ಕದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಅವಕಾಶ ಸಿಕ್ಕಿದ್ದರಿಂದ ಅಲ್ಲಿಂದ ಟಿಸಿ ತೆಗೆದು ಇಲ್ಲಿ ಸೇರಿಸಿದ್ದೇನೆ. ತನ್ನ ಸ್ನೇಹಿತರ ಮಕ್ಕಳು ಕೂಡಾ ಖಾಸಗಿ ಶಾಲೆಯಿಂದ ಇಲ್ಲಿಗೆ ಸೇರ್ಪಡೆಗೊಳಿಸಿದ್ದಾರೆ. ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ, ತುಂಬಾ ಖುಷಿಯಾಗುತ್ತಿದೆ.

-ಮಜೀದ್, ವಿದ್ಯಾರ್ಥಿಯ ಪೋಷಕರು.


ಮಕ್ಕಳ ಸಂಖ್ಯೆ
ಎಲ್‌ಕೆಜಿ 41
ಯುಕೆಜಿ 42
1ನೇ ತರಗತಿ 52
2ನೇ ತರಗತಿ 46
3ನೇ ತರಗತಿ 13
4ನೇ ತರಗತಿ 22
5ನೇ ತರಗತಿ 15 6ನೇ ತರಗತಿ 5
7ನೇ ತರಗತಿ 8 8ನೇ ತರಗತಿ 17
ಒಟ್ಟು 261 

share
ಅಬ್ದುಲ್ ರಹಿಮಾನ್ ತಲಪಾಡಿ
ಅಬ್ದುಲ್ ರಹಿಮಾನ್ ತಲಪಾಡಿ
Next Story
X