ಹುಡುಗಿಯರ ಜತೆ ಅನುಚಿತವಾಗಿ ವರ್ತಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಿದ್ದಾರೆ ಈ ಸಿಎಂ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : "ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುವುದಿಲ್ಲ ಎಂದು ರಾಜಧಾನಿ ದಿಲ್ಲಿಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಪ್ರತಿಜ್ಞೆಗೈಯ್ಯುವಂತೆ ಮಾಡುವ ಯೋಜನೆ ನಮ್ಮ ಸರಕಾರದ ಮುಂದಿದೆ'' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೈಗಾರಿಕಾ ಸಂಸ್ಥೆ ಎಫ್ಐಸಿಸಿಐ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, "ಹುಡುಗಿಯರೊಂದಿಗೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂದು ಎಲ್ಲಾ ಹುಡುಗರೂ ನಿರ್ಧರಿಸುವಂತೆ ಅವರ ಮೇಲೆ ನೈತಿಕ ಒತ್ತಡ ಹೇರಬೇಕಿದೆ. ಹುಡುಗಿಯರು ಕೂಡ ಅವರ ಸೋದರರ ಜತೆ ಮಾತನಾಡಿ ಯಾವುದೇ ಹುಡುಗಿಯ ಜತೆ ಅವರು ತಪ್ಪಾಗಿ ವರ್ತಿಸದಂತೆ ತಾಕೀತು ಮಾಡಬೇಕು. ಹುಡುಗಿಯೊಡನೆ ದುರ್ವರ್ತನೆ ತೋರಿದ್ದೇ ಆದಲ್ಲಿ ಮನೆಯೊಳಗೆ ಸೇರಿಸುವುದಿಲ್ಲ ಎಂದು ತಾಯಂದಿರೂ ತಮ್ಮ ಪುತ್ರರಿಗೆ ಎಚ್ಚರಿಕೆ ನೀಡಬೇಕಿದೆ'' ಎಂದು ಕೇಜ್ರಿವಾಲ್ ಹೇಳಿದರು.
Next Story