ಮುಂಡ್ಕಿನಜಡ್ಡು: ಡಿ.15ರಂದು ನೀರಿನ ನಿರ್ವಹಣೆ ಮಾಹಿತಿ
ಬ್ರಹ್ಮಾವರ, ಡಿ.13: ಜಿಲ್ಲಾ ಕೃಷಿಕ ಸಂಘ, ಬ್ರಹ್ಮಾವರ ವಲಯ ಸಮಿತಿ ಆಯೋಜಿಸಿರುವ ವೈಜ್ಞಾನಿಕ ಕೃಷಿ ಮತ್ತು ನೀರಿನ ಸಮಸ್ಯೆ ನಿರ್ವಹಣೆ ಮಾಹಿತಿ ಸಭೆ ಡಿ.15ರಂದು ಬೆಳಗ್ಗೆ 9:30ಕ್ಕೆ ಮುಂಡ್ಕಿನಜೆಡ್ಡುನ ಶ್ರೀಗೋಪಾಲಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.
ನಿವೃತ್ತ ಶಿಕ್ಷಕ ತಿಮ್ಮಪ್ಪ ಶೆಟ್ಟಿ ಆರೂರು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿಯ ಪ್ರಭಾಕರ ವಿ. ಶೆಟ್ಟಿ ವಹಿಸಲಿದ್ದಾರೆ. ಉದ್ಯಮಿ ಶ್ರೀಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾಹಿತಿದಾರರಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ್ ಭಟ್, ರವೀಂದ್ರ ಗುಜ್ಜರಬೆಟ್ಟು, ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ ಬೋಜ ಶೆಟ್ಟಿ, ಮುಂಡ್ಕಿನಜಡ್ಡು ಪಾಲ್ಗೊಳ್ಳುವರು.
ಕುಡಿಯುವ ಹಾಗು ಕೃಷಿ ನೀರಿನ ಸಮಸ್ಯೆಗಳು, ನೀರಿನ ಸಮರ್ಪಕ ನಿರ್ವಹಣೆ, ಸರಕಾರದ ನಿರ್ಲಕ್ಷ್ಯತೆ ವಿರುದ್ಧ ಪ್ರತಿಭಟನೆ ಮಾಹಿತಿ ಹಾಗೂ ತಜ್ಞ ಕೃಷಿಕರಿಂದ ಕೃಷಿ ಬೆಳೆಗಳ ವ್ಶೆಜ್ಞಾನಿಕ ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳು ಕುರಿತ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುು ಎಂದು ಸಂಘದ ಪ್ರಕಟಣೆ ತಿಳಿಸಿದೆ.





