ಜನರು ಹೊಡೆದಾಡುವಂತೆ ಮಾಡುವುದು ಬಿಜೆಪಿ ಕಾರ್ಯಸೂಚಿ: ಸೋನಿಯಾ
ಹೊಸದಿಲ್ಲಿ, ಡಿ. 14: "ಬ್ಯಾಂಕ್ನಲ್ಲಾಗಲಿ ಅಥವಾ ಮನೆಯಲ್ಲಾಗಲಿ ಜನತೆಯ ಹಣಕ್ಕೆ ಸುರಕ್ಷ್ಷತೆ ಇಲ್ಲವಾಗಿದೆ. ಜನರು ತಮ್ಮ ಹಣವನ್ನು ಬ್ಯಾಂಕ್ನಲ್ಲಿ ಇಡುವ ಹಾಗಿಲ್ಲ. ಇದು ಮೋದಿ-ಶಾ ಆಡಳಿತ ವೈಖರಿ. ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವ ಪ್ರಧಾನಿ ಮೋದಿ ಅವರ ‘ಸಬ್ಕಾ ಸಾಥ್, ಸಬ್ ಕಾ ವಿಕಾಸ್’ಎಲ್ಲಿಗೆ ಹೋಗಿದೆ?ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
" ಪೌರತ್ವ ಕಾಯ್ದೆ ಭಾರತವನ್ನು ನಾಶ ಮಾಡಲಿದೆ. ಸಂಸತ್ತು ಹಾಗೂ ಸಂಸ್ಥೆಗಳ ಬಗ್ಗೆ ಮೋದಿ ಹಾಗೂ ಶಾಗೆ ಚಿಂತೆಯಿಲ್ಲ. ನೈಜ ವಿಚಾರವನ್ನು ಮುಚ್ಚಿಟ್ಟು ಜನರನ್ನು ಹೊಡೆದಾಡುವಂತೆ ಮಾಡುವುದು ಅವರ ನಿಜವಾದ ಕಾರ್ಯಸೂಚಿ. ಬಿಜೆಪಿ ಪ್ರತಿದಿನವೂ ಸಂವಿಧಾನವನ್ನು ಉಲ್ಲಂಘಿಸುತ್ತದೆ. ಮತ್ತೊಂದೆಡೆ ಸಂವಿಧಾನ ದಿನವನ್ನು ಆಚರಿಸುತ್ತದೆ. ದೇಶ ಹಾಗೂ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸದಾಕಾಲ ನಿರ್ವಹಿಸುತ್ತದೆ'' ಎಂದು ಭಾರತ್ ಬಚಾವೋ ರ್ಯಾಲಿಯಲ್ಲಿ ಸೋನಿಯಾ ಭರವಸೆ ನೀಡಿದರು.
Next Story