ಜಿಲ್ಲಾ ಮಟ್ಟದ 'ಕೈ ಬರಹ' ಸ್ಪರ್ಧೆ

ಮೂಡುಬಿದಿರೆ: ದುಂಡಾಗಿ ಬರೆಯುವುದು ಒಂದು ಕಲೆ. ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಬೇರೆ ಬೇರೆ ರೀತಿಯ ಪ್ರತಿಭೆಗಳಿರುತ್ತದೆ. ಕೆಲವರು ಓದುವುದರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಬಹುದು ಅದೇ ರೀತಿ ಇನ್ನುಳಿದ ವಿದ್ಯಾರ್ಥಿಗಳು ದುಂಡಗಿನ ಅಕ್ಷರಗಳನ್ನು ಬರೆಯುವ ಮೂಲಕ ಗಮನಸೆಳೆಯುತ್ತಾರೆಂದು ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ವೇತಾ ಜಿ.ಎಸ್. ಹೇಳಿದರು.
ದ.ಕ ಜಿಲ್ಲಾ ಮಟ್ಟದ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ "ಕನ್ನಡ", "ಇಂಗ್ಲೀಷ್" ಮತ್ತು "ಹಿಂದಿ" ಕೈ ಬರಹ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರುಗಳಾದ ಗಣೇಶ್ (ಮಚ್ಚಿನ), ವಿದ್ಯಾಲತಾ (ಹೊಸಂಗಡಿ), ಚಲಪತಿ (ಪಂಜ) ಹಾಗೂ ನೀರುಮಾರ್ಗದ ಸಾವಿತ್ರಿ ಉಪಸ್ಥಿತರಿದ್ದರು.
ಶಿಕ್ಷಕಿ ವಿದ್ಯಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಿಸಲು ರಾಜ್ಯಾದ್ಯಂತ ಕೈ ಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಸ್ಪುಟವಾಗಿ ಬರೆಯಲು ಈ ಸ್ಪರ್ಧೆಯು ಪ್ರೇರಣೆಯಾಗಲಿದೆ ಎಂದರು.
"ವಸತಿ ಶಾಲೆಗಳು ನಿಮಗೆಷ್ಟು ಉಪಯುಕ್ತ" ಎಂಬ ವಿಷಯದ ಕುರಿತು ಸ್ಪರ್ಧೆ ನಡೆದಿದ್ದು ಜಿಲ್ಲೆಯ 11 ಶಾಲೆಗಳ 99 ವಿದ್ಯಾರ್ಥಿಗಳು ಭಾಗವಹಿಸಿದ್ದರು.






.jpg)
.jpg)

