Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇನ್ನೂ ಪತ್ತೆಯಾಗದ ಏಳು ಮೀನುಗಾರರ ಕುರುಹು

ಇನ್ನೂ ಪತ್ತೆಯಾಗದ ಏಳು ಮೀನುಗಾರರ ಕುರುಹು

ಸುವರ್ಣ ತ್ರಿಭುಜ ನಾಪತ್ತೆ ಪ್ರಕರಣಕ್ಕೆ 1 ವರ್ಷ: ದುರಂತಕ್ಕೆ ದೊರಕದ ಸ್ಪಷ್ಟ ಕಾರಣ

ನಝೀರ್ ಪೊಲ್ಯನಝೀರ್ ಪೊಲ್ಯ15 Dec 2019 12:06 PM IST
share
ಇನ್ನೂ ಪತ್ತೆಯಾಗದ ಏಳು ಮೀನುಗಾರರ ಕುರುಹು

 ಉಡುಪಿ, ಡಿ.14: ದೇಶಾದ್ಯಂತ ಭಾರೀ ಆತಂಕ ಸೃಷ್ಟಿಸಿದ್ದ ಮಲ್ಪೆಯ ‘ಸುವರ್ಣ ತ್ರಿಭುಜ’ ಬೋಟು ಅವಘಡ ಹಾಗೂ ಅದರಲ್ಲಿದ್ದ ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ರವಿವಾರ (ಡಿ.15) ಒಂದು ವರ್ಷ ತುಂಬಿದ್ದು, ಈ ಅವಘಡಕ್ಕೆ ಕಾರಣ ಮತ್ತು ಅದರಲ್ಲಿದ್ದ ಮೀನುಗಾರರು ಏನಾದರು ಎಂಬ ಬಗ್ಗೆ ಈವರೆಗೆ ಸ್ಪಷ್ಟವಾದ ಕುರುಹು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಕುರಿತ ತನಿಖಾ ವರದಿ ಜೊತೆಗೆ, ಇವರ ಕುಟುಂಬಗಳಿಗೆ ಕೇಂದ್ರ ಸರಕಾರ ಭರವಸೆ ನೀಡಿದ ಗರಿಷ್ಠ ಪರಿಹಾರ ನೀಡಬೇಕೆಂಬ ಒತ್ತಾಯ ಕೂಡ ಜೋರಾಗಿಯೇ ಕೇಳಿ ಬರುತ್ತಿದೆ.

ಮಲ್ಪೆ ಬಡಾನಿಡಿಯೂರು ಚಂದ್ರಶೇಖರ್ ಕೋಟ್ಯಾನ್ ಮಾಲಕತ್ವದ ಸುವರ್ಣ ತ್ರಿಭುಜ ಬೋಟಿನಲ್ಲಿ ಚಂದ್ರಶೇಖರ್ ಕೋಟ್ಯಾನ್(40), ಬಡಾನಿಡಿ ಯೂರಿನ ದಾಮೋದರ ಸಾಲ್ಯಾನ್(40), ಕುಮಟಾದ ಲಕ್ಷ್ಮಣ ಹರಿಕಂತ್ರ (45), ಸತೀಶ್ ಹರಿಕಂತ್ರ(35), ಹೊನ್ನಾವರದ ರವಿ ಮಂಕಿ(27), ಭಟ್ಕಳದ ಹರೀಶ್(28), ರಮೇಶ್(30) ಎಂಬವರು 2018ರ ಡಿ.13ರಂದು ರಾತ್ರಿ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು.

 ಡಿ.15ರಂದು ರಾತ್ರಿ ಸಂಪರ್ಕ ಕಡಿದುಕೊಂಡ ಸುವರ್ಣ ತ್ರಿಭುಜ ಬೋಟು ಅನಂತರ ಹಠಾತ್ತನೆ ನಾಪತ್ತೆಯಾಗಿತ್ತು. ಈ ಬಗ್ಗೆ ಇತರ ಬೋಟಿನವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಡಿ.22ರಂದು ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ಕೋಟ್ಯಾನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೀನುಗಾರರ ಪತ್ತೆಗಾಗಿ ಸಹಸ್ರ ಸಂಖ್ಯೆಯಲ್ಲಿ ಜನ ರಸ್ತೆಗೆ ಇಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು.

ಬೋಟಿನ ಅವಶೇಷ ಪತ್ತೆ: ನೌಕಸೇನೆಯ ‘ನಿರೀಕ್ಷಕ್’ ಹಡಗಿನಲ್ಲಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದಾಗ ಮೇ 1ರಂದು ಅಂದರೆ ನಾಪತ್ತೆಯಾಗಿ 137 ದಿನಗಳ ನಂತರ ಬೋಟ್‌ನ ಅವಶೇಷಗಳು ಮಹಾರಾಷ್ಟ್ರ ರಾಜ್ಯದ ಮಾಲ್ವಾನ್‌ನಿಂದ 33 ಕಿ.ಮೀ. ದೂರದ ಸಮುದ್ರದ 60 ಅಡಿ ಆಳದಲ್ಲಿ ಪತ್ತೆ ಯಾಗಿತ್ತು. ಆದರೆ ಅಲ್ಲಿ ಯಾವುದೇ ಮೃತದೇಹಗಳು ಪತ್ತೆಯಾಗಿರಲಿಲ್ಲ.

ಈ ನಡುವೆ ಅವಘಡ ಸಂಭವಿಸಿದ ಡಿ.15ರಂದು ಕೊಚ್ಚಿಯಿಂದ ಮಹಾರಾಷ್ಟ್ರದ ಮೂಲಕ ಕಾರವಾರಕ್ಕೆ ಸಾಗುತ್ತಿದ್ದ ನೌಕಸೇನೆಯ ಐಎನ್‌ಎಸ್ ಕೊಚ್ಚಿ ಹಡಗಿನ ತಳಭಾಗಕ್ಕೆ ಹಾನಿಯಾಗಿರುವುದು ಕಂಡುಬಂದಿತ್ತು. ಈ ಬೃಹತ್ ನೌಕೆ ಢಿಕ್ಕಿಯಾಗಿ ಸುವರ್ಣ ತ್ರಿಭುಜ ಬೋಟು ಮುಳುಗಿರಬಹುದೆಂಬ ಬಲವಾದ ಶಂಕೆ ಕೂಡಾ ವ್ಯಕ್ತವಾಗಿತ್ತು. ‘ಸಮುದ್ರದ ಆಳದಲ್ಲಿ ಪತ್ತೆಯಾದ ಬೋಟಿನ ಅವಷೇಶಗಳ ಫೋಟೊವನ್ನು ಮಾತ್ರವೇ ನಮಗೆ ತೊರಿಸಲಾಗಿದೆ. ಅದು ಬಿಟ್ಟು ಯಾವುದೇ ಮಾಹಿತಿ ಲಭ್ಯ ನೀಡಿಲ್ಲ. ಈ ಸಂದರ್ಭದಲ್ಲಿ ಮಾಡಿರುವ ವೀಡಿಯೋಗ್ರಫಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಈ ಕುರಿತು ಯಾವುದೇ ಸಮಗ್ರ ತನಿಖೆಯಾಗದ ಹಿನ್ನೆಲೆ ಯಲ್ಲಿ ಘಟನೆ ಹೇಗೆ ಸಂಭವಿಸಿರಬಹುದು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ’ ಎಂದು ದಾಮೋದರ ಸಾಲ್ಯಾನ್ ಕುಟುಂಬಸ್ಥರು ತಿಳಿಸಿದ್ದಾರೆ.

ರಾಜ್ಯದಿಂದ ತಲಾ 11 ಲಕ್ಷ ರೂ. ಪರಿಹಾರ: ಬೋಟ್ ಜೊತೆ ನಾಪತ್ತೆ ಯಾದವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ತಾತ್ಕಾಲಿಕ ಪರಿಹಾರವನ್ನು ರಾಜ್ಯ ಸರಕಾರ ನೀಡಿತ್ತು. ನಂತರ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ಪರಿಹಾರಧನವನ್ನು ನೀಡಲಾಗಿತ್ತು. ಹೀಗೆ ಎಲ್ಲ ಏಳು ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 11 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡಿತ್ತು.

‘ಮತ್ತೆ ದಿಲ್ಲಿಗೆ ಹೋಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುವ ಬಗ್ಗೆ ಮೀನುಗಾರರ ಸಂಘ ಭರವಸೆ ನೀಡಿದೆ. ಈ ಬಗ್ಗೆ ಯಾವುದೇ ಮಾಹಿತಿ ನಮಗೆ ಇಲ್ಲ. ರಾಜ್ಯ ಸರಕಾರದಿಂದ ಪರಿಹಾರ ಬಂದಿದ್ದು, ಕೇಂದ್ರ ಸರಕಾರದಿಂದ ನಯಾ ಪೈಸೆ ಪರಿಹಾರ ಈವರೆಗೆ ನಮಗೆ ಸಿಕ್ಕಿಲ್ಲ ಎಂದು ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ಕೋಟ್ಯಾನ್ ತಿಳಿಸಿದ್ದಾರೆ.

ಆರದ ಕುಟುಂಬದ ನೋವು: ನಾಪತ್ತೆಯಾದ ಮೀನುಗಾರರ ಕುಟುಂಬ ಗಳು ಇಂದಿಗೂ ತಮ್ಮವರ ನೆನಪಿನಲ್ಲಿ ಕಣ್ಣೀರಿಡುತ್ತಿದೆ. ಬಡಾನಿಡಿಯೂರಿನ ದಾಮೋದರ್ ಸಾಲ್ಯಾನ್‌ರ ತಂದೆ ಸುವರ್ಣ ತಿಂಗಳಾಯ ಮಗನ ಚಿಂತೆಯಲ್ಲಿ ನ.7ರಂದು ಮೃತಪಟ್ಟಿದ್ದಾರೆ. ಭಟ್ಕಳದ ರಮೇಶ್‌ರ ಸಹೋದರ ಚಂದ್ರಶೇಖರ್, ನಾಪತ್ತೆಯಾದ ತನ್ನ ಅಣ್ಣನ ಚಿಂತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಮೇ 16ರಂದು ಮೃತಪಟ್ಟಿದ್ದರು.

ಅವಘಡದ ಕುರಿತ ಯಾವುದೇ ಮಾಹಿತಿ ತಿಳಿಯದ ಚಂದ್ರಶೇಖರ್ ಕೋಟ್ಯಾನ್‌ರ ಪತ್ನಿ ಶ್ಯಾಮಲಾ, ದಾಮೋದರ್ ಸಾಲ್ಯಾನ್‌ರ ತಾಯಿ ಸೀತಾ ಸಾಲ್ಯಾನ್, ಪತ್ನಿ ಮೋಹಿನಿ ಅವರ ಮನೆಯವರು ದಾಮೋದರ್ ಮನೆಗೆ ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿ ಇನ್ನೂ ಇದ್ದಾರೆ.

ದಾಮೋದರ್ ಸಾಲ್ಯಾನ್, ಮೋಹಿನಿಯ ತಾಯಿಯ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಮೋಹಿನಿಯ ತಂಗಿ ಮದುವೆಗೆ ದಾಮೋದರ್ ಸಾಲ್ಯಾನ್ ಅವರೇ ಸಿದ್ಧತೆ ನಡೆಸುತ್ತಿದ್ದರು. ಇದೀಗ ಅವರೇ ಇಲ್ಲದೆ ಮದುವೆ ನಿಂತು ಹೋಗಿದೆ. ಇದೇ ರೀತಿ ನಾಪತ್ತೆಯಾದ ಉತ್ತರ ಕನ್ನಡ ಜಿಲ್ಲೆ ಐವರು ಬಡ ಕುಟುಂಬಗಳು ಕೂಡ ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿವೆ.

ಬೋಟು ಅವಶೇಷ ಮೇಲಕ್ಕೆತ್ತಲು ಸಿದ್ಧತೆ

ಮಹಾರಾಷ್ಟ್ರ ರಾಜ್ಯದ ಮಾಲ್ವಾನ್‌ನಿಂದ 33 ಕಿ.ಮೀ. ದೂರದ ಸಮುದ್ರದ ಮಧ್ಯೆ ಸುಮಾರು 60 ಅಡಿ ಆಳದಲ್ಲಿ ಮುಳುಗಿದೆ ಎನ್ನಲಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳನ್ನು ಮೇಲಕ್ಕೆತ್ತಿದರೆ ಮಾತ್ರ ಬೋಟು ಅವಘಡಕ್ಕೆ ನಿಖರವಾದ ಕಾರಣ ಮತ್ತು ಅದರಲ್ಲಿದ್ದವರು ಜಲ ಸಮಾಧಿಯಾಗಿದ್ದರೆ ಅವರ ಮೃತದೇಹಗಳು ಪತ್ತೆಯಾಗಬಹುದು ಎಂಬುದು ಪೊಲೀಸ್ ಇಲಾಖೆ ಹಾಗೂ ಕುಟುಂಬದವರ ಅಭಿಪ್ರಾಯವಾಗಿದೆ.

‘ಸುವರ್ಣ ತ್ರಿಭುಜ ಬೋಟಿನ ಅವಘಡಕ್ಕೆ ಸಂಬಂಧಿಸಿ ತಾಂತ್ರಿಕ ವರದಿ ಯನ್ನು ತಜ್ಞರಿಂದ ಪಡೆದುಕೊಂಡಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸ ಲಾಗುತ್ತಿದೆ. ಸಮುದ್ರ ಮಧ್ಯೆ ಮುಳುಗಿರುವ ಬೋಟಿನ ಅವಶೇಷವನ್ನು ಮೇಲಕ್ಕೆ ಎತ್ತಿದ ನಂತರವೇ ಈ ಬಗ್ಗೆ ಸ್ಪಷ್ಟವಾದ ಚಿತ್ರಣ ತಿಳಿದು ಬರಲು ಸಾಧ್ಯ. ಬೋಟು ಮೇಲಕ್ಕೆತ್ತಲು ಎಷ್ಟು ಖರ್ಚುವೆಚ್ಚಗಳಾಗಬಹುದು ಎಂಬುದರ ಬಗ್ಗೆ ಕೆಲವೊಂದು ಖಾಸಗಿ ಏಜೆನ್ಸಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅದೇ ರೀತಿ ನೌಕಪಡೆಯವರಿಂದಲೂ ಈ ಬಗ್ಗೆ ಮಾಹಿತಿ ಕೇಳಿದ್ದೇವೆ’ ಎಂದು ಉಡುಪಿ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಕೇಂದ್ರ ಸರಕಾರದಿಂದ ದೊರೆಯದ ಪರಿಹಾರ

ಬೋಟು ಅವಘಡಕ್ಕೀಡಾಗಿ ಒಂದು ವರ್ಷ ಸಂದರೂ ಕೇಂದ್ರ ಸರಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಒತ್ತಾಯಿಸಿ ಸುವರ್ಣ ತ್ರಿಭುಜ ಬೋಟು ನಾಪತ್ತೆಗೆ ಸಂಬಂಧಿಸಿದಂತೆ ರಚಿಸಲಾದ ಪ್ರತ್ಯೇಕ ಸಮಿತಿಯ ನೇತೃತ್ವದಲ್ಲಿ ನಿಯೋಗವು ದಿಲ್ಲಿಗೆ ತೆರಳಲು ಸಿದ್ಧತೆ ನಡೆಸುತ್ತಿದೆ.

‘ಡಿ.18ರಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ದಿಲ್ಲಿಗೆ ತೆರಳಿ, ಹಿಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಾಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ. ಈ ಸಂದರ್ಭ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು. ಸದ್ಯ ನಾವು ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಬೇಕು ಎಂಬ ಒಂದೇ ಬೇಡಿಕೆಯನ್ನು ಇಟ್ಟುಕೊಂಡು ಸಚಿವರನ್ನು ಭೇಟಿಯಾಗುತ್ತಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.

ನಮ್ಮ ಮನೆಯವರನ್ನು ಕಳೆದುಕೊಂಡು ಒಂದು ವರ್ಷ ಆಯಿತು. ಇನ್ನು ಕೂಡ ಅವರು ಏನಾದರು ಎಂಬುದು ಗೊತ್ತಿಲ್ಲ. ಹಡಗು ಢಿಕ್ಕಿ ಹೊಡೆದಿದ್ದರೆ ಏಳು ಮಂದಿ ಕೂಡ ಹೇಗೆ ಸಾಯುತ್ತಾರೆ. ಅದರಲ್ಲಿ ಒಬ್ಬರಾದರೂ ಬದುಕಿರಬಹುದಲ್ಲವೇ. ಈ ಬೋಟು ಏನಾಯಿತು, ಅವರೆಲ್ಲ ಎಲ್ಲಿ ಹೋದರು ಎಂಬುದು ನಮಗೆ ಗೊತ್ತಾಗಬೇಕು. ತಾಯಿ ನನ್ನ ಸಹೋದರನ ಚಿಂತೆಯಲ್ಲಿಯೇ ಇದ್ದಾರೆ. ಈಗಲೂ ಕೇಳುತ್ತಲೇ ಇದ್ದಾರೆ. ಆದರೆ ಅದಕ್ಕೆ ನಮ್ಮಲ್ಲಿ ಏನು ಉತ್ತರ ಇಲ್ಲ.

 ನಾಗರಾಜ್,

ನಾಪತ್ತೆಯಾದ ಭಟ್ಕಳದ ರಮೇಶ್ ಸಹೋದರ

ಸುವರ್ಣ ತ್ರಿಭುಜ ಬೋಟಿನಲ್ಲಿ ನಾಪತ್ತೆಯಾದ ಎಲ್ಲ ಕುಟುಂಬಗಳಿಗೆ ರಾಜ್ಯ ಸರಕಾರ ನೀಡಿದ ಪರಿಹಾರಕ್ಕಿಂತ ದುಪ್ಪಟ್ಟು ಪರಿಹಾರವನ್ನು ಕೇಂದ್ರ ಸರಕಾರ ತಕ್ಷಣವೇ ನೀಡಬೇಕು. ಪತ್ತೆಯಾಗಿರುವ ಬೋಟಿನದೆಂದು ಹೇಳಲಾದ ಅವಶೇಷವನ್ನು ಕೂಡಲೇ ಮೇಲಕ್ಕೆ ಎತ್ತಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು. ನಾಪತ್ತೆಯಾದ ಬೋಟುಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುವ ರೇಡಾರ್‌ಗಳನ್ನು ಅಳವಡಿಸಲು ಸರಕಾರ ಸಬ್ಸಿಡಿ ನೀಡಬೇಕು.

ಕೃಷ್ಣ ಸುವರ್ಣ,

ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X