Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿದ್ಯೆ, ಡಿಗ್ರಿಗಳಿಂದ ಶಾಂತಿ ನೆಮ್ಮದಿ...

ವಿದ್ಯೆ, ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು : ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

ಮುರುಡೇಶ್ವರ ಜನತಾವಿದ್ಯಾಲಯ ಪ್ರೌಢಶಾಲೆಯಲ್ಲಿ ಸುವರ್ಣ ಮಹೋತ್ಸವ ಸಮಾರಂಭ

ವಾರ್ತಾಭಾರತಿವಾರ್ತಾಭಾರತಿ15 Dec 2019 7:46 PM IST
share
ವಿದ್ಯೆ, ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು : ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

ಭಟ್ಕಳ : ವಿದ್ಯೆಯು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ. ಆದರೆ ಇಂದಿನ ವಿದ್ಯೆ, ಡಿಗ್ರಿ, ಇವ್ಯಾವುವೂ ಕೂಡಾ ಶಾಂತಿ ನಮ್ಮೆದಿಯನ್ನು ಕೊಡಲಾರವು ಎಂದು ಉಜಿರೆಯ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.

ಅವರು ಇಲ್ಲಿನ ಮುರ್ಡೇಶ್ವರದ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಅಂಕೋಲದ ಕೆನರಾ ಎಜ್ಯುಕೇಶನ್ ಟ್ರಸ್ಟ್ ಜಂಟಿಯಾಗಿ ಎರ್ಪಡಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. 

ನಮ್ಮ ವಿದ್ಯೆಯು ಸಂಸ್ಕಾರಯುತ, ದೇಶ ಕಟ್ಟುವ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ವಿದ್ಯೆಯು ಸಾರ್ಥಕ್ಯವನ್ನು ಪಡೆಯುತ್ತದೆ.  ಕೇವಲ ಅಂಕಗಳ ಹಿಂದೆ ಓಡುವ ನಮ್ಮ ಶಿಕ್ಷಣ ಇಲಾಖೆ ಹಾಗೂ ಪಾಲಕರು ಎಂದೂ ಮಕ್ಕಳ ಭವಿಷ್ಯದ ಜೀವನದ ಕುರಿತು ಚಿಂತಿಸುತ್ತಿಲ್ಲ. ಪ್ರತಿ ವಿಷಯದಲ್ಲಿಯೂ ಕೂಡಾ 100ಕ್ಕೆ 100  ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಕರ, ಪಾಲಕರ ಮನ ತಣಿಸಿದರೆ ಅದುವೇ ಸಂತೋಷ ಎನ್ನುವ ಮನಸ್ಥಿತಿಯಲ್ಲಿ ನಾವಿದ್ದೇವೆ ಎಂದ ಅವರು ನಮ್ಮ ಶಿಕ್ಷಣದಲ್ಲಿಯ ದೋಷದಿಂದಾಗಿ ಇಂದು ದೇಶದಲ್ಲಿ ಗೊಂದಲಗಳು, ಅವಘಡಗಳು ಸಂಭವಿಸುತ್ತಿವೆ. ಇಂದಿನ ಶಿಕ್ಷಣ ಪದ್ಧತಿಯು ಸಮಾಜಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದೂ ಅವರು ಹೇಳಿದರು.

ಶಿಕ್ಷಣ ಇಲಾಖೆ ಕೇವಲ ಮಕ್ಕಳ ಅಂಕಗಳನ್ನು ಹೆಚ್ಚು ಮಾಡುವಂತೆ ಸುತ್ತೋಲೆಗಳನ್ನು ಹೊರಡಿಸುತ್ತದೆಯೇ ವಿನಹ ಅವರಿಗೆ ಸಂಸ್ಕಾರ ಕಲಿಸುವಂತೆ ಎಂದೂ ಸುತ್ತೋಲೆ ಹೊರಡಿಸುವುದಿಲ್ಲ.  ಶಿಕ್ಷಕರೂ ಕೂಡಾ ಸಂಸ್ಕಾರ ಭರಿತ ಶಿಕ್ಷಣವನ್ನು, ಪ್ರತಿ ವಿದ್ಯಾರ್ಥಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎನ್ನುವ ಕುರಿತು ಚಿಂತಿಸದೇ ಅಂಕಗಳ ಹಿಂದೆ ಹೋಗುತ್ತಿದ್ದಾರೆ. ಕೇವಲ ಪಠ್ಯಕ್ರಮವನ್ನು ಮುಗಿಸುವುದಷ್ಟೇ ನಮ್ಮ ಕೆಲಸ ಎಂದು ಶಿಕ್ಷಕರು ತಿಳಿದು ಕೊಂಡಿದ್ದರೆ ಅದು ತಪ್ಪು, ಮಕ್ಕಳಿಗೆ ನೈತಿಕ ಶಿಕ್ಷಣದೊಂದಿಗೆ ನಮ್ಮ ರಾಷ್ಟ್ರ ಪುರುಷರ ಜೀವನ ಚರಿತ್ರೆಯನ್ನು ಹೇಳುವ ಮೂಲಕ ಅವರ ಮನಸ್ಸಿನಲ್ಲಿ ತಾವೂ ಆದರ್ಶ ವ್ಯಕ್ತಿಯಾಗಬೇಕು ಎನ್ನುವ ಭಾವನೆ ಮೊಳಕೆಯೊಡೆಯುವಂತೆ ಮಾಡುವುದು ಮುಖ್ಯ ಎಂದರು.

ಓರ್ವ ಉತ್ತಮ ಶಿಕ್ಷಕ ಮೂರು ತಾಸು ನಿರಂತರವಾಗಿ ಪಾಠ ಮಾಡಿದರೂ ಕೂಡಾ ವಿದ್ಯಾರ್ಥಿಗಳ ಆಸಕ್ತಿ ಕುಂದುವುದಿಲ್ಲ. ಆದರೆ ಕಲಿಸುವ ಪಾಠದಲ್ಲಿ ಹುರುಳಿಲ್ಲವಾದರೆ ವಿದ್ಯಾರ್ಥಿಗಳು ಪಾಠವನ್ನಾದರೂ ಹೇಗೆ ಕೇಳುತ್ತಾರೆ ಎಂದ ಅವರು ಶಿಕ್ಷಕರು ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವ ಕೆಲಸ ಮಾಡಬೇಕು. ತಾನು ತನ್ನ ತಂದೆ-ತಾಯಿ, ಸುತ್ತಮುತ್ತಲಿನ ಪರಿಸರ, ನೆರೆಹೊರೆಯನ್ನು ಪ್ರೀತಿ ಯಿಂದ ಕಾಣುವಂತಹ ವಿದ್ಯಾರ್ಥಿಗಳನ್ನು ಶಿಕ್ಷಣ ಸಮಾಜಕ್ಕೆ ಕೊಡಬೇಕಾಗಿದೆ ಎಂದೂ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. 

ಇಂದಿನ ವಿಕಾರವಾದ ವರ್ತನೆಗೆ ನಮ್ಮ ಸರಕಾರಗಳೇ ಕಾರಣ ಎಂದು ನೇರವಾಗಿ ಆರೋಪಿಸಿದ ಸ್ವಾಮೀಜಿ ಅನೇಕ ಜಾಹೀರಾತುಗಳನ್ನು ನಾವು ನೋಡುತ್ತೇವೆ. ಅವುಗಳನ್ನು ಅನಗತ್ಯ ಅಶ್ಲೀಲತೆಯನ್ನು ತುಂಬಲಾಗುತ್ತದೆ. ಒಂದು ಬಟ್ಟೆ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಚಿನ್ನ ಹೀಗೆ ಯಾವುದೋ ಒಂದು ವಸ್ತುವನ್ನು ಪ್ರಚಾರ ಪಡಿಸುವಾಗಲೂ ಅಶ್ಲೀಲತೆಯ ಅಗತ್ಯವಿದೆಯೇ ಇದನ್ನು ಸರಕಾರ ನಿರ್ಬಂಧಿಸಬೇಕು ಎಂದೂ ಅವರು ಆಗ್ರಹಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ಹಾಗೂ ಶಾಲೆಗೆ ಭೋಜನ ಶಾಲೆಯನ್ನು ಕಟ್ಟಿಸಿಕೊಟ್ಟ ಮಂಕಾಳ ಎಸ್. ವೈದ್ಯ, ಕೆನರಾ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ್, ಕಾರ್ಯದರ್ಶಿ ಕೆ.ವಿ.ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ನಾಯ್ಕ, ಸಾಹಿತಿ ಹಾಗೂ ಟ್ರಸ್ಟ್ ಧರ್ಮದರ್ಶಿ ವಿಷ್ಣು ನಾಯಕ, ಮುಖ್ಯಾಧ್ಯಾಪಕ ಟಿ.ಡಿ.ಲಮಾಣಿ, ಚಿತ್ರಕೂಟದ ಗುರೂಜಿ, ಹಿರಿಯರಾದ ಜೆ.ಎನ್.ನಾಯ್ಕ, ಜಿ.ಪಂ.ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಸುಬ್ರಾಯ ನಾಯ್ಕ ಕಾಯ್ಕಿಣಿ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಪೂರ್ವ ಸ್ವಾಮೀಜಿವರು ಹಳೆ ವಿದ್ಯಾರ್ಥಿಗಳು ಕೊಡಮಾಡಿದ ಸ್ವಾಗತ ಕಮಾನು, ದಿನಕರ ಸಭಾ ಭವನ, ಮಂಕಾಳ ವೈದ್ಯರ ಕೊಡುಗೆಯಾದ ಊಟದ ಹಾಲ್ ಇವುಗಳನ್ನು ಉದ್ಘಾಟಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X