ಅಪರಿಚಿತ ವಾಹನ ಢಿಕ್ಕಿ: ಪಾದಚಾರಿ ಮೃತ್ಯು
ಬ್ರಹ್ಮಾವರ, ಡಿ.16: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಡೈರಿಗೆ ಹಾಲು ಕೊಡಲು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಚೇರ್ಕಾಡಿ -ಕೊಕ್ಕರ್ಣೆ ಕಾಂಕ್ರೀಟ್ ರಸ್ತೆಯ ಬೆನಗಲ್ ಎಂಬಲ್ಲಿ ಡಿ.16ರಂದು ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.
ಮೃತರನ್ನು ಸ್ಥಳೀಯರಾದ ರವಿರಾಜ ಹೆಗ್ಡೆ(74) ಎಂದು ಗುರುತಿಸಲಾಗಿದೆ. ಇವರು ದನದ ಹಾಲನ್ನು ಬೆನಗಲ್‌ನಲ್ಲಿರುವ ಹಾಲಿನ ಡೈರಿಗೆ ಕೊಡಲು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಯಾವುದೋ ಅಪರಿಚಿತ ವಾಹನ ಇವರಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಯಿತ್ತೆನ್ನಲಾಗಿದೆ.
ಇದರಿಂದ ಇವರ ತಲೆಯ ಹಿಂಭಾಗ, ಮುಖದ ಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ರವಿರಾಜ್ ಹೆಗ್ಡೆ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





