ಶಾಲಾ ವ್ಯಾನ್ ಢಿಕ್ಕಿ: 4 ವರ್ಷದ ಬಾಲಕ ಮೃತ್ಯು

ಬೆಂಗಳೂರು, ಡಿ.16: ಖಾಸಗಿ ಶಾಲೆಯೊಂದರ ವ್ಯಾನ್ ಢಿಕ್ಕಿಯಾಗಿ ಪುಟ್ಟ ಬಾಲಕನೋರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಮ್ಮಸಂದ್ರದಲ್ಲಿರುವ ಸೆಂಟ್ ಪೀಟರ್ಸ್ ಶಾಲೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ದೀಕ್ಷಿತ್(4) ಎಂಬಾತ ಮೃತ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ಸುಮಾರಿಗೆ ಶಾಲೆ ಸಮಯದ ನಂತರ, ಚಾಲಕ ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದಿದ್ದ. ಈ ವೇಳೆ, ಏಕಾಏಕಿ ವಾಹನದ ಮುಂಭಾಗ ದೀಕ್ಷಿತ್ ಬಂದ ಪರಿಣಾಮ, ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಶಾಲಾ ವ್ಯಾನ್‌ನಲ್ಲಿ ಸಹಾಯಕ ಇಲ್ಲದ ಕಾರಣ ಈ ಅಪಘಾತ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಹೆಬ್ಬಗೋಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





