ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಉಡುಪಿ, ಡಿ.16: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಉಡುಪಿ ಜಿಲ್ಲೆಯ ವ್ಯಾಪ್ತಿಗೊಳಪಡುವ 118-ಬೈಂದೂರು, 119-ಕುಂದಾಪುರ, 120-ಉಡುಪಿ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಡಿ. 16ರಂದು ಚುನಾವಣಾ ಆಯೋಗದ ವೆಬ್‌ಸೈಟ್- www.ceokarnataka.kar.nic.in- ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದಲ್ಲಿ ಪ್ರಕಟಿಸಲಾಗಿದೆ.
ಜಿಲ್ಲೆಯ ಮತದಾರರು ಡಿ.16ರಂದು ಪ್ರಕಟಿಸಲಾದ ಕರಡು ಮತದಾರ ಪಟ್ಟಿಯನ್ನು ಸ್ವತಹ ಪರಿಶೀಲಿಸಿ, ಅವರವರ ಹೆಸರು ಇರುವುದನ್ನು ದೃಢಪಡಿಸಿ ಕೊಳ್ಳಬೇಕು. ಒಂದು ವೇಳೆ ತಮ್ಮ ವಾಸಸ್ಥಾನದ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಆಗದೆ ಇದ್ದಲ್ಲಿ, 2020ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ಭಾರತೀಯ ನಾಗರಿಕರು ಡಿ.16 ರಿಂದ ಜನವರಿ 15ರವರೆಗೆ ನಡೆಯುವ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಅವಧಿಯಲ್ಲಿ ನಮೂದಿತ ನಮೂನೆ-6ರಲ್ಲಿ ತಮ್ಮ ಕ್ಷೇತ್ರದ ಮತಗಟ್ಟೆ ಹಂತದ ಅಧಿಕಾರಿ (ಬಿಎಲ್‌ಓ) ಅವರಿಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಅಲ್ಲದೇ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಇತ್ಯಾದಿಗಳರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ನಮೂನೆ-8ರ ಅರ್ಜಿ ಯಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆದುಹಾಕಲು ನಮೂನೆ-7ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಅರ್ಜಿಗಳನ್ನು - www.voterreg.kar.nic.in-ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿ, ಅವುಗಳ ಪ್ರಿಂಟ್‌ಔಟ್‌ಗಳನ್ನು ಡೌನ್‌ಲೋಡ್ ಮಾಡಿ 7 ದಿನಗಳ ಒಳಗೆ ಜಿಲ್ಲಾ ಚುನಾವಣಾಧಿಕಾರಿ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸಬೇಕು.
ಜಿಲ್ಲೆಯಲ್ಲಿ ಈವರೆಗೆ ನೊಂದಣಿಯಾದ ಮತದಾರರ ವಿವರ ಹೀಗಿದೆ.
ಬೈಂದೂರು: 1,10,086 ಪುರುಷರು, 1,16,065 ಮಹಿಳೆಯರು, 3 ತೃತೀಯ ಲಿಂಗಿಗಳು. ಒಟ್ಟು 2,26,154.
ಕುಂದಾಪುರ: 96,490 ಪುರುಷರು, 1,04,262 ಮಹಿಳೆಯರು, 1 ತೃತೀಯ ಲಿಂಗಿಗಳು. ಒಟ್ಟು 2,00,753.
ಉಡುಪಿ: 1,01,108 ಪುರುಷರು, 1,07,814 ಮಹಿಳೆಯರು, 0 ತೃತೀಯ ಲಿಂಗಿಗಳು. ಒಟ್ಟು 2,08,922.
ಕಾಪು: 87,078 ಪುರುಷರು, 95,331 ಮಹಿಳೆಯರು, 7 ತೃತೀಯ ಲಿಂಗಿಗಳು. ಒಟ್ಟು 1,82,416.
ಕಾರ್ಕಳ: 86,815ಪುರುಷರು, 94,290 ಮಹಿಳೆಯರು, 0 ತೃತೀಯ ಲಿಂಗಿಗಳು ಒಟ್ಟು 181105.
ಜಿಲ್ಲೆಯಲ್ಲಿ: 4,81,577 ಪುರುಷರು, 5,17,762 ಮಹಿಳೆಯರು, 11 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 9,99,350 ಮಂದಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
4,81,577 ಪುರುಷರು, 5,17,762 ಮಹಿಳೆಯರು, 11 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 9,99,350 ಮಂದಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಯಾವುದೇ ಅರ್ಹ ಭಾರತೀಯ ಪ್ರಜೆಯು ಎರಡು ಕಡೆ ಹೆಸರು ನೊಂದಣಿ ಮಾಡಿಸಿಕೊಳ್ಳುವುದು ಪ್ರಜಾಪ್ರತಿನಿಧಿ ಕಾಯ್ದೆ 1950ರ ಕಲಂ 31ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ನಮೂದಿತ ನಮೂನೆಯ ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಮತಗಟ್ಟೆ ಹಂತದ ಅಧಿಕಾರಿ (ಬಿಎಲ್‌ಓ) ಹಾಗೂ ಈ ಕೆಳಗೆ ತಿಳಿಸಿರುವ ಕಚೇರಿಗಳನ್ನು ಸಂರ್ಕಿಸಿ ಮಾಹಿತಿಯನ್ನು ಪಡೆಯಬಹುದು.
ಜಿಲ್ಲಾಧಿಕಾರಿ ಕಚೇರಿ:0820-2574926, ತಾಲೂಕು ಕಚೇರಿ ಉಡುಪಿ: 0820-2521198, ತಾಲೂಕು ಕಚೇರಿ ಕುಂದಾಪುರ: 08254-235567, ತಾಲೂಕು ಕಚೇರಿ ಕಾರ್ಕಳ:08258-230057, ಸಹಾಯಕ ಕಮಿಷನರ್ ಕಚೇರಿ ಕುಂದಾಪುರ: 08254-231984ನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂ:1950ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







