ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಯಾದಗಿರಿ, ಡಿ.16: ಕೇಂದ್ರ ಸರಕಾರ ದೇಶದಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಲ್ಲಿನ ಶಹಾಪುರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಕೇಂದ್ರ ಬಿಜೆಪಿ ಸರಕಾರ ಪೌರತ್ವದ ನೆಪದಲ್ಲಿ ಅನೀತಿ ಹಾಗೂ ಸಂವಿಧಾನ ವಿರೋಧಿ ಕಾಯ್ದೆ ಜಾರಿಗೊಳಿಸಿ ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದೆ. ಇದಕ್ಕೆ ದೇಶದ ಜನತೆ ಅವಕಾಶ ಮಾಡಿಕೊಡುವುದಿಲ್ಲ. ಯಾವುದೇ ತ್ಯಾಗ ಮಾಡಿಯಾದರೂ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಡೆಯುತ್ತೇವೆಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿಮುಖಂಡ ಸೈಯದ್ ಸೈದುದ್ದಿನ್ ಖಾದ್ರಿ, ಯೂತ್ ಕಾಂಗ್ರೆಸ್ ಮುಖಂಡ ಸೈಯದ್ ಶಫಿಯೋದ್ದಿನ್, ವಿಶಕಂಠ ಬಡಿಗೇರ್, ಮಹಾದೇವಪ್ಪ ಸಾಲಿಮನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಅಜಯ ಯಳಸಂಗಿ, ಮುಹಮ್ಮದ್ ರಫೀಚೌದರಿ, ನಸೀರುದ್ದಿನ್ ಸೇರಿದಂತೆ ನೂರಾರು ದಲಿತ ಸಂಘಟನೆ ಮುಖಂಡರು, ಎಸ್‌ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.
Next Story





