ರಾಜತಾಂತ್ರಿಕರ ಉಚ್ಚಾಟನೆ ತಪ್ಪು: ಚೀನಾ

ಬೀಜಿಂಗ್, ಡಿ. 16: ಬೇಹುಗಾರಿಕೆ ಆರೋಪದಲ್ಲಿ ಚೀನಾದ ರಾಜತಾಂತ್ರಿಕರನ್ನು ಅಮೆರಿಕ ಉಚ್ಚಾಟಿಸಿರುವುದು ತಪ್ಪು ಎಂದು ಚೀನಾ ಸೋಮವಾರ ಹೇಳಿದೆ.
ವರ್ಜೀನಿಯದಲ್ಲಿರುವ ಸೂಕ್ಷ್ಮ ಸೇನಾ ನೆಲೆಯೊಂದಕ್ಕೆ ಭೇಟಿ ನೀಡಿದ ಇಬ್ಬರು ಚೀನಿ ರಾಜತಾಂತ್ರಿಕರನ್ನು ಅಮೆರಿಕ ಸೆಪ್ಟಂಬರ್‌ನಲ್ಲಿ ಸದ್ದಿಲ್ಲದೆ ಉಚ್ಚಾಟಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘ನ್ಯೂಯಾರ್ಕ್ ಟೈಮ್ಸ್’ ವರದಿಗೆ ಪ್ರತಿಕ್ರಿಯಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಈ ಆರೋಪಗಳು ‘ವಾಸ್ತವಗಳಿಗೆ ಸಂಪೂರ್ಣ ವಿರುದ್ಧವಾಗಿವೆ’ ಎಂದು ಹೇಳಿದರು.
Next Story





