ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೂಳೆಯ ಕೀಲು, ಮಂಡಿಯ ಚಿಪ್ಪುವಿನ ಸಮಗ್ರ ಆರೈಕೆ ಕೇಂದ್ರ : ಡಾ. ಸುದರ್ಶನ ಬಲ್ಲಾಳ್
ಮಂಗಳೂರು, ಡಿ.18: ಮೂಳೆಯ ಕೀಲು ಮತ್ತು ಮಂಡಿಯ ಚಿಪ್ಪುವಿನ ಆರೈಕೆಯ ಬಗ್ಗೆ ದೇಶದಲ್ಲಿಯೇ ಮೊದಲ ಬಾರಿಗೆ ಸಮಗ್ರ ಆರೈಕೆ ಕೇಂದ್ರವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ ಬಲ್ಲಾಳ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಸ್ವೀಡನ್ ನ ಗೊಟೆನ್ ಬರ್ಗ್ ನ ಪ್ರೊ. ಮ್ಯಾಟ್ಸ್ ಬ್ರಿಟ್ ಬರ್ಗ್ ಕೇಂದ್ರ ವನ್ನು ಉದ್ಘಾಟಿಸಿರುವುದಾಗಿ ಬಲ್ಲಾಳ್ ತಿಳಿಸಿದ್ದಾರೆ.
ಜಗತ್ತಿನ ಲಭ್ಯವಿರುವ ಅತ್ಯಂತ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ತಂತ್ರಜ್ಞಾನವನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಪ್ರದರ್ಶನ ಸೂಚಕಗಳನ್ನು ಬಿಡುಗಡೆ ಮಾಡಿದ ಮೊಟ್ಟಮೊದಲ ಮತ್ತು ಏಕೈಕ ವೈದ್ಯಕೀಯ ಸೌಲಭ್ಯ ಕೇಂದ್ರ ವಾಗಿದೆ. ದೇಶದಲ್ಲಿ ಮಂಡಿ ಮತ್ತು ಸೊಂಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆ ನೀಡುವ ನವೀನ ವೈದ್ಯಕೀಯ ಸಲಕರಣೆಗಳನ್ನು ಕೇಂದ್ರ ಹೊಂದಿದೆ ಎಂದು ಡಾ. ಸುದರ್ಶನ ಬಲ್ಲಾಳ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಹೆಲ್ತ್ ಎಂಟರ್ಪ್ರೈಸ್ ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಜೋಸ್, ಕೆಎಂಸಿ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ ವೇಣುಗೋಪಾಲ, ಕೆಎಂಸಿ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆಯ ಅಧಿಕಾರಿ ಸಗೀರ್ ಸಿದ್ದೀಕ್ ಮಂಡಿ ಮತ್ತು ಕೀಲು ಜೋಡಣಾ ಶಸ್ತ್ರಚಿಕಿತ್ಸೆಯ ತಜ್ಞ ಡಾ. ಯೋಗೀಶ್ ಡಿ. ಕಾಮತ್ , ಡಾ. ಅನಂತರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.