Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿಯ ಪೌರತ್ವ ಕಾಯ್ದೆ ಎಲ್ಲರಿಗೂ...

ಮೋದಿಯ ಪೌರತ್ವ ಕಾಯ್ದೆ ಎಲ್ಲರಿಗೂ ಅಪಾಯಕಾರಿ: ದ ಗಾರ್ಡಿಯನ್

ವಾರ್ತಾಭಾರತಿವಾರ್ತಾಭಾರತಿ18 Dec 2019 9:03 PM IST
share
ಮೋದಿಯ ಪೌರತ್ವ ಕಾಯ್ದೆ ಎಲ್ಲರಿಗೂ ಅಪಾಯಕಾರಿ: ದ ಗಾರ್ಡಿಯನ್

ಹೊಸದಿಲ್ಲಿ,ಡಿ.18: ಭಾರತದ ನೂತನ ಪೌರತ್ವ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು,ಪ್ರತಿಭಟನಾಕಾರರು ಪೊಲೀಸರ ಕ್ರೂರ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ನಿಸ್ಸಂಶಯವಾಗಿ ಇದು ಆರು ವರ್ಷಗಳ ಹಿಂದೆ ಅಧಿಕಾರಕ್ಕೇರಿದಾಗಿನಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿರೋಧದ ಬೃಹತ್ ಪ್ರದರ್ಶನವಾಗಿದೆ ಮತ್ತು ಈ ವಿರೋಧ ಒಳ್ಳೆಯ ಕಾರಣಕ್ಕಾಗಿದೆ ಎಂದು ಬ್ರಿಟನ್‌ನ ‘ದ ಗಾರ್ಡಿಯನ್’ ತನ್ನ ಸಂಪಾದಕೀಯ ಲೇಖನದಲ್ಲಿ ಹೇಳಿದೆ.

ದೇಶವು ಅಪಾಯಕಾರಿ ಪಥದಲ್ಲಿ ಸಾಗುತ್ತಿದೆ ಎನ್ನುವ ಅರಿವು ಪ್ರತಿಭಟನಾಕಾರರನ್ನು ಬೀದಿಗೆ ತಂದಿದೆ ಎಂದಿರುವ ಅದು,ನೂತನ ಶಾಸನವು ಮೋದಿಯವರ ಹಿಂದು ರಾಷ್ಟ್ರವಾದವು ದೇಶದ ಬಹುತ್ವ ಮತ್ತು ಜಾತ್ಯತೀತತೆಯ ಬುನಾದಿಗೆ ಬೆದರಿಕೆಯನ್ನೊಡ್ಡಿದೆ ಎನ್ನುವುದಕ್ಕೆ ಪುರಾವೆಯಾಗಿದೆ. ಬಹುತ್ವ ಮತ್ತು ಜಾತ್ಯತೀತತೆಯನ್ನು ಕಾಯ್ದುಕೊಳ್ಳುವ ಏಳು ದಶಕಗಳ ಪ್ರಯತ್ನದ ಆಶಯದ ಮೇಲೆ ಭೀತಿಯ ಕರಿನೆರಳು ಕವಿದಿದೆ ಎಂದು ಹೇಳಿದೆ.

 ಈ ಕಾನೂನು ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ,ಬದಲಿಗೆ ಅವುಗಳನ್ನು ವಿಸ್ತರಿಸುತ್ತದೆ ಎಂಬ ಬಿಜೆಪಿ ಸರಕಾರದ ಹೇಳಿಕೆ ತೋರಿಕೆಯದ್ದಾಗಿದೆ. ಅದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ಬರುವ ಹಿಂದುಗಳು, ಸಿಕ್ಖರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ತ್ವರಿತವಾಗಿ ಭಾರತೀಯ ಪೌರತ್ವವನ್ನು ಒದಗಿಸುತ್ತದೆ. ಆದರೆ ಕಾನೂನು ಒಳಗೊಳ್ಳುವಿಕೆಯ ಕ್ರಮವೆಂದು ಯಾರೂ ಪರಿಗಣಿಸುತ್ತಿಲ್ಲ. ಅದು ಅಂತರ್ಗತವಾಗಿ ಒಂದು ಸಮುದಾಯವನ್ನು ಹೊರಗಿಡುವ ಶಾಸನವಾಗಿದ್ದು,ಕಿರುಕುಳಕ್ಕೆ ಹೆದರಿ ಭಾರತಕ್ಕೆ ಪರಾರಿಯಾಗುವ ಮುಸ್ಲಿಮರ ವಿರುದ್ಧ ತಾರತಮ್ಯವನ್ನೆಸಗುತ್ತಿದೆ ಮತ್ತು ಮುಸ್ಲಿಮ್ ಪ್ರಜೆಗಳು ‘ನಿಜವಾದ ’ಭಾರತೀಯರಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಅದು ವಿದೇಶಿಯರು ಮತ್ತು ಭಾರತೀಯ ಪ್ರಜೆಗಳಿಗೆ ಸಂವಿಧಾನದಲ್ಲಿ ಒದಗಿಸಿರುವ ರಕ್ಷಣೆಗಳನ್ನು ಕಡೆಗಣಿಸುತ್ತಿದೆ ಎಂದು ದ ಗಾರ್ಡಿಯನ್ ಹೇಳಿದೆ.

ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರಾಗಿರಲಿ ಅಥವಾ ಪಾಕಿಸ್ತಾನದ ಅಹ್ಮದಿಯಾಗಳು ಮತ್ತು ಇತರ ಮುಸ್ಲಿಮರಾಗಿರಲಿ,ಮುಸ್ಲಿಮರಿಗೆ ಭಾರತದ ನೆರವಿನ ಅಗತ್ಯವಿಲ್ಲ ಎನ್ನುವುದು ಕಾನೂನಿನ ಹಿಂದಿನ ತರ್ಕವಾಗಿದೆ. ಅವರು ಮೋದಿಯವರ ದೇಶಕ್ಕೆ ಬಂದರೆ ಅಕ್ರಮ ವಲಸಿಗರಾಗಿ ಬಿಡುತ್ತಾರೆ. ಹೆಚ್ಚಿನವರಲ್ಲಿ ಸೂಕ್ತ ದಾಖಲೆಗಳಿಲ್ಲದ ದೇಶದಲ್ಲಿ ಹಲವಾರು ಭಾರತೀಯ ಪ್ರಜೆಗಳೂ ಇದೇ ಸ್ಥಿತಿಗೆ ತಳ್ಳಲ್ಪಡುವ ಅಪಾಯದಲ್ಲಿದ್ದಾರೆ ಎಂದು ಸಂಪಾದಕೀಯವು ಹೇಳಿದೆ.

ಅಸ್ಸಾಮಿನಲ್ಲಿ ಎನ್‌ಆರ್‌ಸಿ ಸಂಕಷ್ಟ,ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧಗಳ ಹೇರಿಕೆ, ಹಿಂದೂ ರಾಷ್ಟ್ರವಾದಿಗಳಿಂದ ಥಳಿಸಿ ಹತ್ಯೆಗಳು,ಸುಮಾರು 2,000 ಮುಸ್ಲಿಮರ ಹತ್ಯೆಯಾದ 2002ರ ಗುಜರಾತ್ ಕೋಮು ದಂಗೆ ಇತ್ಯಾದಿಗಳನ್ನೂ ದ ಗಾರ್ಡಿಯನ್ ಪ್ರಸ್ತಾಪಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X