ಸಹಪಾಠಿಗಳಿಗೆ ಅಶ್ಲೀಲ ಸಂದೇಶ ರವಾನೆ: ಮುಂಬೈಯ ಐಬಿ ಶಾಲೆಯ 14 ವರ್ಷದ ವಿದ್ಯಾರ್ಥಿಗಳ ಅಮಾನತು
ಮುಂಬೈ, ಡಿ. 18: ವ್ಯಾಟ್ಸ್ ಆ್ಯಪ್‌ನಲ್ಲಿ ಸಹಪಾಠಿಗಳಿಗೆ ಹಿಂಸಾತ್ಮಕ ಹಾಗೂ ಲೈಂಗಿಕ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿದ 13ರಿಂದ 14 ವರ್ಷಗಳ ನಡುವಿನ 8 ವಿದ್ಯಾರ್ಥಿಗಳನ್ನು ಮುಂಬೈಯ ಅತ್ಯುಚ್ಛ ಶ್ರೇಣಿಯ ಐಬಿ ಶಾಲೆ ಅಮಾನತುಗೊಳಿಸಿದೆ.
ಬಾಲಕಿಯರ ತಾಯಂದಿರು ವ್ಯಾಟ್ಸ್ ಆ್ಯಪ್ ಸಂದೇಶ ನೋಡಿ ಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದ ಬಳಿಕ ಈ ವಿಷಯ ಬಹಿರಂಗವಾಗಿದೆ. ಈ ವ್ಯಾಟ್ಸ್ ಆ್ಯಪ್ ಸಂದೇಶ ನೂರಾರು ಪುಟಗಳಷ್ಟು ಇವೆ. ಈ ಸಂದೇಶಗಳಲ್ಲಿ ‘ಗ್ಯಾಂಗ್ ಬ್ಯಾಂಗ್’, ‘ರೇಪ್’ನಂತಹ ಪದಗಳನ್ನು ಬಳಸಲಾಗಿದೆ. 8 ಮಂದಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ದೇಹದ ಬಗ್ಗೆ ಅವಮಾನ ಮಾಡಿದ್ದಾರೆ. ‘ಗೇ’ (ಪುರುಷ ಸಲಿಂಗಕಾಮಿ), ‘ಲೆಸ್ಪಿಯನ್’ (ಸ್ತ್ರಿ ಸಲಿಂಗ ಕಾಮಿ) ಎಂದು ಕರೆದಿದ್ದಾರೆ.
ಸಂದೇಶದ ಒಂದು ಸಂಭಾಷಣೆಯಲ್ಲಿ ಬಾಲಕನೋರ್ವ ತನ್ನ ಸಹಪಾಠಿ ಬಗ್ಗೆ, ‘‘ಒಂದು ರಾತ್ರಿ ಹೋಗುವ ಹಾಗೂ ಅವಳನ್ನು ಬ್ಯಾಂಗ್ ಮಾಡುವ’’ ಎಂದು ಹೇಳುತ್ತಾನೆ. ಅನಂತರ ಆತ ಬಾಲಕಿಯನ್ನು ಉಲ್ಲೇಖಿಸಿ ‘ಗ್ಯಾಂಗ್ ಬ್ಯಾಂಗ್’ ಪದವನ್ನೂ ಬಳಸುತ್ತಾನೆ. ಸಂವಹನದ ಉದ್ದಕ್ಕೂ ಬಾಲಕರು ಬಾಲಕಿಯರಿಗೆ ‘ಟ್ರಾಶ್’ ಪದ ಬಳಕೆ ಮಾಡುತ್ತಾನೆ. ಇದಲ್ಲದೆ ಹಿಂಸಾತ್ಮಕ ಪದಗಳಿಂದ ಕೂಡಿದ ಭಾಷೆಯನ್ನು ಬಳಕೆ ಮಾಡಲಾಗಿದೆ. ‘ರೇಪ್’ ಎಂಬ ಪದ ಸಂವಹನದಲ್ಲಿ ನಾಲ್ಕು ಬಾರಿ ಬಳಕೆಯಾಗಿದೆ. ಅವಳನ್ನು ತಂದೆ ಅತ್ಯಾಚಾರ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಸಲಿಂಗದ ಬಗ್ಗೆ ಕೂಡ ಬಾಲಕರು ಮಾತನಾಡಿದ್ದಾರೆ.







