ದೇಶದಿಂದ ಓಡಿಸಲು ಸಂಚು ರೂಪಿಸುವವರನ್ನೇ ದೇಶದಿಂದ ಹೊರಹಾಕುತ್ತೇವೆ: ಮೌಲಾನಾ ನಾಸಿರ್ ರಝ್ವಿ
ಹಾಸನದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಹಾಸನ, ಡಿ.18: ಭೂತಕ್ಕೆ ಹೆದರಿ, ಮನೆ ಬಿಡುವ ಮೂರ್ಖರು ನಾವಲ್ಲ, ಮನೆಯಿಂದ ಭೂತವನ್ನು ಓಡಿಸುವ ಮಾಂತ್ರಿಕರು ನಾವು. ನಮ್ಮನ್ನು ಈ ದೇಶದಿಂದ ಓಡಿಸಲು ಸಂಚು ರೂಪಿಸುವರನ್ನು ಈ ದೇಶದಿಂದ ಹೊರಹಾಕುತ್ತೇವೆ. ನಾವು ದೇಶ ಪ್ರೇಮಿಗಳು, ದೇಶಕ್ಕಾಗಿ ಬಲಿದಾನ ನೀಡೆದ್ದೇವೆ. ಈ ದೇಶ ನಮ್ಮದು, ನಾವೇ ಹಕ್ಕುದಾರರು ಎಂದು ಮೌಲಾನಾ ನಾಸೀರ್ ರಝ್ವಿ ಹೇಳಿದರು.
ನಗರದಲ್ಲಿ ನಡೆದ ಅಮೀರ್ ಹಸನ್ ಮಖಾನ್ ಮೈದಾನದಲ್ಲಿ ನಡೆದ ನಾವು ಭಾರತೀಯರು ಪೌರತ್ವ ಮಸೂದೆ ವಿರೋಧಿಗಳು ಸಮಾವೇಶದಲ್ಲಿ ಮಾತನಾಡಿದ ಅವರು, ಪೌರತ್ವದ ಭೂತದ ಮೂಲಕ ಭಾರತೀಯ ಮುಸ್ಲಿಮರನ್ನು ಬೆದರಿಸಲಾಗುತ್ತಿದೆ. ಈ ಭೂತಕ್ಕೆ ಬೆದರುವರು ನಾವಲ್ಲ, ಭೂತವನ್ನೆ ಓಡಿಸುತ್ತೇವೆ ಎಂದರು.
ಈ ದೇಶಕ್ಕೆ ಮುಸ್ಲಿಮರ ಕೂಡುಗೆ ಅಪಾರ. ಮುಸ್ಲಿಮರು ಅನ್ನಕ್ಕಾಗಿ, ನೀರಿಗಾಗಿ, ಸೂರಿಗಾಗಿ, ಭೂಮಿಗಾಗಿ, ಬೀದಿಗೆ ಇಳಿದು ಬಿಕ್ಷೆ ಬೇಡಲಿಲ್ಲ. ಇಂದು ದೇಶಾದ್ಯಂತ ಮುಸ್ಲಿಮರು ಬೀದಿಗೆ ಇಳಿದಿದ್ದು ನಮ್ಮ ದೇಶದ ಪೌರತ್ವ ಪರೀಕ್ಷೆಗೆ ಒಳಪಡಿಸುವುದರ ವಿರುದ್ಧವಾಗಿದೆ. ಈ ಮಸೂದೆ ಸಂವಿಧಾನದ ವಿರುದ್ಧವಾಗಿದೆ. ಜಾತ್ಯತೀತ ಈ ಸಂವಿಧಾನದ ಆತ್ಮವಾಗಿದೆ ಎಂದರು.
ನಾವು ಯಾರಿಗೂ ಹೆದರುವುದಿಲ್ಲ. ಹೆದರಿಕೆ ಹುಟ್ಟಿಸುವಂತಹ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದ ಅವರು, ನಾವು ಹೆದರುವುದು ಭಾರತದ ಸಂವಿಧಾನಕ್ಕೆ ಮಾತ್ರ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರೂ ತೋಳಿಗೆ ಕಪ್ಪು ಪಟ್ಟಿ ಧರಿಸಿ ಗಮನಸೆಳೆದರು. ಇದೆ ವೇಳೆ ಮುಸ್ಲಿಂ ಹಿತಾರಕ್ಷಣಾ ಒಕ್ಕೂಟದ ಹಾಗೂ ಧಾರ್ಮಿಕ ಗುರುಗಳಾದ ಮುಪ್ತಿ ಜುಬೇರ್ ಅಹಮದ್, ಜಂಟಿ ಕಾರ್ಯದರ್ಶಿ ಫಾರೂಕ್, ಸಯ್ಯದ್ ತಾಜ್, ಧಾರ್ಮಿಕ ಗುರುಗಳಾದ ಹೈದರಾಲಿ ಖಾನ್, ಮಹಮದ್ ಅನ್ಸರ್ ಸಾಹೇಬ್, ವಕೀಲರಾದ ಅನ್ಶದ್, ಜಮೀರ್, ಫಾರುಖ್ ನಿವೃತ್ತ ಅಧಿಕಾರಿ ಸಜಾದ್ ಪಾಶ, ವಕ್ಫ್ ಮಂಡಲಿ ಅಧ್ಯಕ್ಷ ಫ್ರೂಟ್ ಬಾಬು ಮುಂತಾದವರು ಇದ್ದರು.







